ಮೆಲ್ಬೋರ್ನ್ (ಆಸ್ಟ್ರೇಲಿಯಾ): ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಮಂಡಿ ನೋವಿನಿಂದ ಬಳಲುತ್ತಿದ್ದ ರೋಹಿತ್ ಶರ್ಮಾ ಇದೀಗ ಚೇತರಿಸಿಕೊಂಡಿದ್ದು, ಆಸೀಸ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆರಂಭಿಕರಾಗಿ ಕ್ರೀಸಿಗೆ ಇಳಿಯಲಿದ್ದಾರೆ.
ಸಿಡ್ನಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕಾಗಿ ಆಸೀಸ್ಗೆ ಬಂದಿಳಿದಿರುವ ಶರ್ಮಾ, 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. ಈ ನಡುವೆ ಇಂದು ನೆಟ್ನಲ್ಲಿ ಪ್ರಾಕ್ಟಿಸ್ ಮಾಡಿ ಬೆವರು ಸುರಿಸಿದರು.