ಕರ್ನಾಟಕ

karnataka

ETV Bharat / sports

ಆಸೀಸ್​ ಟೆಸ್ಟ್​​: ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಹಿಟ್​ಮ್ಯಾನ್ ಉಪನಾಯಕ - IND VS Aus Test 2020

ತಮ್ಮ 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿರುವ ರೋಹಿತ್ ತಂಡ ಸೇರಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪುಜಾರ ಜೊತೆಗೂಡಿ ನಾಯಕ ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ತಂಡದ ಉಪನಾಯಕ ಜವಾಬ್ದಾರಿ ವಹಿಸಲಿದ್ದಾರೆ.

rohit-sharma
ಹಿಟ್​ಮ್ಯಾನ್ ರೋಹಿತ್ ಶರ್ಮಾ

By

Published : Jan 1, 2021, 4:10 PM IST

ಮೆಲ್ಬೋರ್ನ್​​:ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಹಿಟ್​​​​ಮ್ಯಾನ್ ಮರಳಿದ್ದು, ಮೂರನೇ ಟೆಸ್ಟ್​​​ನಲ್ಲಿ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಮುಂದಿನ ಎರಡು ಟೆಸ್ಟ್ ಪಂದ್ಯಾವಳಿಗೆ ರೋಹಿತ್ ಉಪನಾಯಕನಾಗಿ ತಂಡ ಮುನ್ನಡೆಸಲಿದ್ದಾರೆ.

14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿರುವ ರೋಹಿತ್ ಈಗಾಗಲೇ ತಂಡ ಸೇರಿಕೊಂಡಿದ್ದಾರೆ. ಸದ್ಯ ಅವರು ತಂಡಕ್ಕೆ ಮರಳಿರುವುದು ಬ್ಯಾಟಿಂಗ್ ವಿಭಾಗವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಇದರ ಜೊತೆಗೆ, ಆರಂಭಿಕರಾಗಿ ಕಣಕ್ಕಿಳಿಯಲಿರುವ ಹಿಟ್​​ಮ್ಯಾನ್ ಉತ್ತಮ ಆರಂಭ ದೊರಕಿಸಿಕೊಡುವ ನಿರೀಕ್ಷೆ ಇದೆ.

ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯ ವೇಳೆ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು, ಆಸೀಸ್ ವಿರುದ್ಧದ ಮೂರನೇ ಟೆಸ್ಟ್​​ನಲ್ಲಿ ಕಣಕ್ಕಿಳಿಯಲಿದ್ದಾರೆ.

ಓದಿ: ಸಿಡ್ನಿ ಟೆಸ್ಟ್: ಗಾಯಾಳು ಉಮೇಶ್​ ಜಾಗಕ್ಕೆ ವೇಗಿ ನಟರಾಜನ್​ ಆಯ್ಕೆ

ABOUT THE AUTHOR

...view details