ನವದೆಹಲಿ:ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪುನಶ್ಚೇತನ ತರಬೇತಿಯಲ್ಲಿ ತೊಡಗಿರುವ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳಬೇಕೆಂದರೆ ನಾಲ್ಕೈದು ದಿನದಲ್ಲಿ ಆಸ್ಟ್ರೇಲಿಯಾ ವಿಮಾನ ಏರಬೇಕಿದೆ ಎಂದು ಭಾರತ ತಂಡದ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಡಿಸೆಂಬರ್ 17ರಂದು ಅಡಿಲೇಡ್‌ನಲ್ಲಿ ನಡೆಯಲಿದೆ. ಒಂದು ವೇಳೆ ಇಷ್ಟು ದಿನಗಳ ಅಂತರದಲ್ಲಿ ಇಲ್ಲಿಗೆ ಬರಲಾಗದಿದ್ದರೆ ಸರಣಿಯಲ್ಲಿ ಕಾಣಿಸಿಕೊಳ್ಳುವುದು ಕಷ್ಟಸಾಧ್ಯವಾಗಲಿದೆ. ರೋಹಿತ್ ಎನ್‌ಸಿಎಯಲ್ಲಿ ಕೆಲವು ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬಲಗೈ ವೇಗದ ಬೌಲರ್ ಇಶಾಂತ್ ಶರ್ಮಾ ಕೂಡ ಎಂದರು.
ಆಸ್ಟ್ರೇಲಿಯಾಕ್ಕೆ ಯಾವಾಗ ಮರಳಬೇಕು ಎಂಬುದನ್ನು ಅಕಾಡೆಮಿ ನಿರ್ಧರಿಸಲಿದೆ. ಆದರೆ, ನಾವು ಬಹಳ ಹೊತ್ತು ಕಾಯಲು ಆಗುವುದಿಲ್ಲ. ಯಾಕೆಂದರೆ, ಇಲ್ಲಿಗೆ ಬಂದ ಬಳಿಕ ಕ್ವಾರಂಟೈನ್ಗೆ ಒಳಪಡಬೇಕಾಗುತ್ತದೆ. ಇದರಿಂದ ಮತ್ತಷ್ಟು ಪಂದ್ಯಗಳಿಗೆ ಸಿದ್ದರಾಗಲು ಮತ್ತಷ್ಟು ತೊಂದರೆ ಆಗಲಿದೆ.
ಹೀಗಾಗಿ, ಅವರು ನಾಲ್ಕೈದು ದಿನಗಳಲ್ಲಿ ಆಸ್ಟ್ರೇಲಿಯಾಕ್ಕೆ ಬರಬೇಕಿದೆ ಎಂದು ಶಾಸ್ತ್ರಿ ಭಾನುವಾರ (ನವೆಂಬರ್ 22) ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ನೊಂದಿಗೆ (ಎಬಿಸಿ) ನಡೆಸಿದ ಚಾಟ್‌ನಲ್ಲಿ ಹೇಳಿದರು.