ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ನಿಧಾನಗತಿ ಬ್ಯಾಟಿಂಗ್ ಮಾಡಿದ್ದಕ್ಕೆ ಆಸ್ಟ್ರೇಲಿಯಾ ಮಾಜಿ ಆಟಗಾರರಾದ ಅಲನ್ ಬಾರ್ಡರ್, ರಿಕಿ ಪಾಂಟಿಂಗ್, ಟಾಮ್ ಮೂಡಿ ಖಂಡಿಸಿದ್ದಾರೆ.
"ಚೇತೇಶ್ವರ ಪೂಜಾರ ಶಾಟ್ ಆಡಲು ಹೆದರುತ್ತಿದ್ದರು, ಆಸ್ಟ್ರೇಲಿಯನ್ನರ ವಿರುದ್ಧ ಹೋರಾಡುವ ಬದಲು ಕ್ರೀಸ್ನಲ್ಲಿ ಉಳಿಯಲು ನೋಡುತ್ತಿದ್ದರು." ಎಂದು ಮಾಜಿ ನಾಯಕ ಅಲನ್ ಬಾರ್ಡರ್ ಹೇಳಿದ್ದಾರೆ. ಅಲ್ಲದೆ ಮೂರನೇ ಟೆಸ್ಟ್ನ ಮೂರನೇ ದಿನದ ಭಾರತದ ಬ್ಯಾಟಿಂಗ್ ತಂತ್ರಗಳನ್ನು ಸಹ ಅವರು ಖಂಡಿಸಿದ್ದಾರೆ.
ಪೂಜಾರ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಅತಿ ನಿಧಾನಗತಿಯ ಅರ್ಧಶತಕ ಗಳಿಸಿದ್ದರು. ಚೇತೇಶ್ವರ 176 ಎಸೆತಗಳಲ್ಲಿ 50 ರನ್ ಗಳಿಸಿದ್ದರು.