ಕರ್ನಾಟಕ

karnataka

By

Published : Jan 14, 2021, 8:32 PM IST

ETV Bharat / sports

ಮೂಲಸೌಕರ್ಯ ಕೊರತೆಯಿಂದ ತಂಡದ ಪ್ರೇರಣೆ ಕುಂದಿಲ್ಲ: ಬ್ಯಾಟಿಂಗ್​ ಕೋಚ್ ವಿಶ್ವಾಸ

ಮೂಲ ಸೌಲಭ್ಯಗಳ ಕೊರತೆಯನ್ನು ಮುಂದಿಟ್ಟುಕೊಂಡು ಎದೆಗುಂದುವುದಿಲ್ಲ. ಆಟಗಾರರಿಗೆ ಪ್ರೋತ್ಸಾಹ ತುಂಬಿದ್ದೇವೆ. ನಮ್ಮ ಗಮನ ಏನಿದ್ದರೂ ಪಂದ್ಯ ಗೆಲ್ಲುವುದೇ ಹೊರತು ಬೇರೆ ವಿಷಯಗಳ ಮೇಲಲ್ಲ ಎಂದು ಭಾರತ ತಂಡದ ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋರ್​ ಹೇಳಿದರು.

Team Indias batting coach Vikram Rathour
ಭಾರತ ತಂಡದ ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋರ್

ಬ್ರಿಸ್ಬೇನ್​:ತಮಗೆ ವಸತಿ ಕಲ್ಪಿಸಿರುವ ಹೋಟೆಲ್​​ನಲ್ಲಿ ಕಂಡುಬಂದ ಮೂಲ ಸೌಕರ್ಯಗಳ ಕೊರತೆಯಿಂದಾಗಿ ನಮ್ಮ ತಂಡದ ಆಟಗಾರರ ಪ್ರೇರಣೆ ಕುಂದಿಲ್ಲ ಎಂದು ಭಾರತ ತಂಡದ ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋರ್​ ವಿಶ್ವಾಸ ವ್ಯಕ್ತಪಡಿಸಿದರು.

ಆಸ್ಟ್ರೇಲಿಯಾದಲ್ಲಿ ವಿಶ್ವದ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡುತ್ತಿದ್ದೇವೆ. ಅದಕ್ಕಿಂತ ಪ್ರೇರಣೆ ಬೇಕೆ. ಹೋಟೆಲ್​​ನಲ್ಲಿ ಕಾಣಿಸಿಕೊಂಡ ಮೂಲಸೌಲಭ್ಯಗಳ ಸಮಸ್ಯೆ ಪಂದ್ಯ ಗೆಲುವಿಗೆ ಅಡ್ಡಿಯಾಗುವುದಿಲ್ಲ. ಅದು ನಮಗೆ ಅಗತ್ಯವೂ ಇಲ್ಲ. ಕನಿಷ್ಠ ಸೌಲಭ್ಯಗಳನ್ನು ನೀಡದ ಕುರಿತು ಬಿಸಿಸಿಐ ಆಸ್ಟ್ರೇಲಿಯಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸುತ್ತಿದೆ ಎಂದು ಅಂತಿಮ ಟೆಸ್ಟ್​​​ಗೂ ಮುನ್ನಾ ದಿನ ತಿಳಿಸಿದರು.

ಇದನ್ನೂ ಓದಿ:ಗಾಯಗೊಂಡ ಸಿಂಹಗಳು vs ಸೋಲಿಲ್ಲದ ಸರದಾರರು: ಹೊಸ ದಶಕದ ಚೊಚ್ಚಲ ಸರಣಿ ಗೆಲ್ಲೋರು ಯಾರು?

ಮೂಲ ಸೌಲಭ್ಯಗಳ ಕೊರತೆಯನ್ನು ಮುಂದಿಟ್ಟುಕೊಂಡು ಎದೆಗುಂದುವುದಿಲ್ಲ. ಆಟಗಾರರಿಗೆ ಪ್ರೋತ್ಸಾಹ ತುಂಬಿದ್ದೇವೆ. ನಮ್ಮ ಗಮನ ಏನಿದ್ದರೂ ಪಂದ್ಯ ಗೆಲ್ಲುವುದೇ ಹೊರತು ಬೇರೆ ವಿಷಯಗಳ ಮೇಲಲ್ಲ. ನಾಳಿನ ಪಂದ್ಯಕ್ಕೆ ಸಜ್ಜಾಗಿದ್ದೇವೆ ಎಂದ ಅವರು, ಪ್ರೇಕ್ಷಕರಿಂದ ಉಂಟಾಗುವ ಘಟನೆಗಳಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಭಾರತ ತಂಡದ ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋರ್

ಗಾಯಕ್ಕೆ ಒಳಗಾಗಿರುವ ಜಸ್ಪ್ರಿತ್​​ ಬುಮ್ರಾ ವೈದ್ಯಕೀಯ ತಂಡದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಫಿಟ್​​ ಆಗಿದ್ದಾರೆಯೇ ಇಲ್ಲವೇ ಎಂಬುದನ್ನು ಶುಕ್ರವಾರದ ಬೆಳಗ್ಗೆ ಗೊತ್ತಾಗಲಿದೆ ಎಂದರು. ಮೊಹಮ್ಮದ್ ಶಮಿ, ಉಮೇಶ್ ಯಾದವ್ ಗಾಯಕ್ಕೆ ಒಳಗಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ತಲಾ ಒಂದು ಪಂದ್ಯವನ್ನು ಎರಡೂ ತಂಡಗಳು ಗೆದ್ದಿವೆ. ಮೂರನೇ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿದ್ದು, ನಾಳೆ ಬೆಳಿಗ್ಗೆ 5ಗಂಟೆಗೆ (ಭಾರತೀಯ ಕಾಲಮಾನ) ಬ್ರಿಸ್ಬೇನ್​​ನ ಗಬ್ಬಾದಲ್ಲಿ ಅಂತಿಮ ಟೆಸ್ಟ್​ ಪಂದ್ಯ ನಡೆಯಲಿದೆ.

ಭಾರತ ತಂಡದ ಆಟಗಾರರು ಸಿಡ್ನಿಯಿಂದ ಬ್ರಿಸ್ಬೇನ್​​ಗೆ ಬಂದಾಗ ಕ್ವಾರಂಟೈನ್​ಗೆ ಒಳಗಾದರು. ಆದರೆ, ಕ್ವಾರಂಟೈನ್​ನಲ್ಲಿ ಉಳಿದುಕೊಂಡ ಆಟಗಾರರಿಗೆ ರೂಮ್ ಸರ್ವೀಸ್​​​​, ಸ್ವಚ್ಛತಾ ಸಿಬ್ಬಂದಿ ನೀಡಿರಲಿಲ್ಲ. ಈಜುಕೊಳ್ಳಕ್ಕೆ ಆಟಗಾರರಿಗೆ ನಿರ್ಬಂಧಿಸಲಾಗಿತ್ತು. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಭಾರತ ತಂಡದ ಆಟಗಾರರು, ಬಿಸಿಸಿಐಗೆ ದೂರು ನೀಡಿದ್ದರು.

ABOUT THE AUTHOR

...view details