ಕರ್ನಾಟಕ

karnataka

ETV Bharat / sports

ಕಮ್ಮಿನ್ಸ್​ಗೆ ವಿಶ್ರಾಂತಿ: ಆಸ್ಟ್ರೇಲಿಯಾ ತಂಡದ ನಿರ್ಧಾರಕ್ಕೆ ಬ್ರೆಟ್​ ಲೀ, ವಾರ್ನ್​ ಕಿಡಿ - ಟಿ20 ಸರಣಿ

ಕಮ್ಮಿನ್ಸ್​ ಕಳೆದ ಆಗಸ್ಟ್‌ನಲ್ಲಿ ಇಂಗ್ಲೆಂಡ್ ಪ್ರವಾಸದ ಕೈಗೊಂಡಿದ್ದ ವೇಳೆ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. ಅಲ್ಲದೇ ಐಪಿಎಲ್​ನಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಮಿನ್ಸ್ ಆಡಿದ್ದರು. ಆದರೆ, ವರ್ಕ್​ಲೋಡ್​ನ ಮ್ಯಾನೇಜ್​ಮೆಂಟ್​ಗಾಗಿ ಕೊನೆಯ ಏಕದಿನ ಪಂದ್ಯ ಮತ್ತು ಮುಂಬರುವ ಟಿ-20 ಸರಣಿಯಲ್ಲಿ ಅವರಿಗೆ ವಿಶ್ರಾಂತಿ ನೀಡಿದೆ.

ಬ್ರೆಟ್​ ಲೀ
ಬ್ರೆಟ್​ ಲೀ

By

Published : Dec 3, 2020, 7:01 PM IST

ಕ್ಯಾನ್ಬೆರಾ: ಮೊದಲೆರೆಡು ಏಕದಿನ ಪಂದ್ಯಗಳ ನಂತರ ಆಸ್ಟ್ರೇಲಿಯಾ ತಂಡದ ಉಪನಾಯಕ ಮತ್ತು ವೇಗಿ ಪ್ಯಾಟ್​ ಕಮ್ಮಿನ್ಸ್ ಅವ​ರನ್ನು 3ನೇ ಪಂದ್ಯದಲ್ಲಿ ಆಡಿಸದಿರುವುದಕ್ಕೆ ಆಸೀಸ್​ ಮಾಜಿ ಬೌಲರ್​ ಬ್ರೆಟ್​ ಲೀ ಪ್ರಶ್ನಿಸಿದ್ದಾರೆ.

ಕಮ್ಮಿನ್ಸ್​ ಕಳೆದ ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾದ ತಂಡದ ಪರ ಇಂಗ್ಲೆಂಡ್ ಪ್ರವಾಸದ ವೇಳೆ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. ಅಲ್ಲದೇ, ಐಪಿಎಲ್​ನಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಮಿನ್ಸ್ ಆಡಿದ್ದರು. ಆದರೆ, ವರ್ಕ್​ಲೋಡ್​ನ ಮ್ಯಾನೇಜ್​ಮೆಂಟ್​ಗಾಗಿ ಕೊನೆಯ ಏಕದಿನ ಪಂದ್ಯ ಮತ್ತು ಮುಂಬರುವ ಟಿ-20 ಸರಣಿಯಲ್ಲಿ ಅವರಿಗೆ ವಿಶ್ರಾಂತಿ ನೀಡಿದೆ.

"ಇದು ಬಹುಶಃ ಅವರ(ಪ್ಯಾಟ್ ಕಮಿನ್ಸ್) ಕರೆಯಾಗಿರುವುದಿಲ್ಲ. ಕಮಿನ್ಸ್ ಆಡಲು ಬಯಸಿದ್ದರು ಎಂದು ನನಗನ್ನಿಸುತ್ತಿದೆ. ಯಾವುದೇ ಆಟಗಾರ ಕೂಡ ಸಾಮಾನ್ಯವಾಗಿ ಆಡಲು ಬಯಸುತ್ತಾನೆ. ಅವರು ಎರಡು ಪಂದ್ಯಗಳಿಗೆ ಸುಸ್ತಾಗಿರುವುದಿಲ್ಲ ಎಂದು ನಾನು ಆಲೋಚಿಸುತ್ತೇನೆ. ಹೆಚ್ಚು ಪಂದ್ಯಗಳನ್ನು ಆಡಿದಷ್ಟು ಉತ್ತಮ ಲಯಕ್ಕೆ ಬರುವುದನ್ನು ನಾನು ವೈಯಕ್ತಿಕವಾಗಿ ಕಂಡುಕೊಂಡಿದ್ದೆ" ಎಂದು ಬ್ರೆಟ್​ ಲೀ ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡ 3ನೇ ಪಂದ್ಯದಲ್ಲಿ 13 ರನ್​ಗಳಿಂದ ಸೋಲು ಕಂಡಿದೆ. ಎರಡು ತಂಡಗಳ ನಡುವಿನ 3 ಪಂದ್ಯಗಳ ಟಿ-20 ಸರಣಿ ಶುಕ್ರವಾರ ಆರಂಭವಾಗಲಿದೆ.

ಲೀ ಪ್ರಕಾರ, ಗಾಯಗೊಂಡಿರದ ಆಟಗಾರರನ್ನು ಮಾತ್ರ ವಿಶ್ರಾಂತಿ ಬಯಸುತ್ತಾರೆ. ಆದರೆ, ಫಿಟ್​ ಇರುವ ಪ್ರತಿಯೊಬ್ಬರು ಹೆಚ್ಚು ಸಾಧ್ಯವೋ ಅಷ್ಟು ಪಂದ್ಯಗಳನ್ನು ಆಡಲು ಬಯಸುತ್ತಾರೆ. ಸುಮ್ಮನೆ ಒಂದು ವಾರ ಬ್ರೇಕ್ ತೆಗೆದುಕೊಂಡರೆ ಮತ್ತೆ ಲಯಕ್ಕೆ ಮರಳುವುದಕ್ಕೆ ಕಷ್ಟವಾಗುತ್ತದೆ ಎಂದು ಆಸೀಸ್ ಮಾಜಿ ವೇಗಿ ತಿಳಿಸಿದ್ದಾರೆ.

ಸ್ಪಿನ್ ದಂತಕಥೆ ಶೇನ್ ವಾರ್ನ್ ಕೂಡ ಕಮ್ಮಿನ್ಸ್‌ಗೆ ವಿಶ್ರಾಂತಿ ನೀಡುವ ನಿರ್ಧಾರ ಖಂಡಿಸಿದ್ದರು. ಕ್ರಿಕೆಟ್​ ಆಸ್ಟ್ರೇಲಿಯಾ ಐಪಿಎಲ್​ ಆಡಿರುವುದಕ್ಕೆ ರಾಷ್ಟ್ರೀಯ ಆಟಗಾರರಿಗೆ ವಿಶ್ರಾಂತಿ ನೀಡುತ್ತಿದೆ. ಇದು ರಾಷ್ಟ್ರೀಯ ಕರ್ತವ್ಯಕ್ಕಿಂತ ಐಪಿಎಲ್‌ಗೆ ಆದ್ಯತೆ ನೀಡಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಕಿಡಿಕಾರಿದ್ದರು.

ABOUT THE AUTHOR

...view details