ಕರ್ನಾಟಕ

karnataka

ETV Bharat / sports

ಪೃಥ್ವಿ ಶಾ ಸ್ಥಾನದಲ್ಲಿ ಕೆ.ಎಲ್. ರಾಹುಲ್ ಕಣಕ್ಕಿಳಿಸಲಿ: ಟೀಂ ಇಂಡಿಯಾಕ್ಕೆ ಗವಾಸ್ಕರ್ ಸಲಹೆ - ಸುನಿಲ್ ಗವಾಸ್ಕರ್

ಮೊದಲ ಟೆಸ್ಟ್‌ ಪಂದ್ಯದಲ್ಲಿ 36 ರನ್​ಗಳಿಗೆ ಆಲ್​ಔಟ್​ ಆದ ನಂತರ ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳು ಸಹಜವಾಗೇ ರೊಚ್ಚಿಗೆದ್ದಿದ್ದಾರೆ. ಇದು ಸಹಜ ಕೂಡಾ ಎಂದು ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ಹೇಳಿದ್ದಾರೆ.

Sunil Gavaskar
ಸುನಿಲ್ ಗವಾಸ್ಕರ್

By

Published : Dec 21, 2020, 10:20 PM IST

ನವದೆಹಲಿ:ಡಿಸೆಂಬರ್ 26 ರಿಂದ ಎಂಸಿಜಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ ಬದಲಿಗೆ ಕೆ.ಎಲ್ ರಾಹುಲ್ ಅವರನ್ನು ಕಣಕ್ಕಿಳಿಸುವುದು ಉತ್ತಮ ಎಂದು ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

ಇನ್ನು ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಶುಬ್ಮನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕೆಂದಿದ್ದಾರೆ. ಭಾರತ ತಂಡದಲ್ಲಿ 2 ಬದಲಾವಣೆಗಳನ್ನು ನೋಡಲು ನಾನು ಬಯಸಿದ್ದು, ಮೊದಲನೆಯದಾಗಿ, ಪೃಥ್ವಿ ಶಾ ಬದಲಿಗೆ ಕೆ.ಎಲ್ ರಾಹುಲ್ ಅವರನ್ನು ಓಪನರ್ ಆಗಿ ನೇಮಿಸಬೇಕು. ನಂ. 5 ಅಥವಾ ನಂ .6 ರಲ್ಲಿ ಶುಬ್ಮನ್ ಗಿಲ್ ಅವರನ್ನು ಕಣಕ್ಕಿಳಿಸಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ :ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಟೀಂ ಇಂಡಿಯಾ ಕಳಪೆ ಪ್ರದರ್ಶನ: 36ಕ್ಕೆ 9 ವಿಕೆಟ್‌ ಕಳೆದುಕೊಂಡ ವಿರಾಟ್ ಪಡೆ

ಉಳಿದ ಟೆಸ್ಟ್ ಪಂದ್ಯಗಳಲ್ಲಿ ಭಾರತ ಉತ್ತಮ ಫಾರ್ಮ್​ಗೆ ಮರಳಲು ಕೆಲ ಬದಲಾವಣೆಗಳು ಅಗತ್ಯ ಹಾಗೂ ತಂಡ ಹಳಿಗೆ ಮರಳುತ್ತೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. “ಭಾರತವು ಮೆಲ್ಬೋರ್ನ್ ಟೆಸ್ಟ್ ಅನ್ನು ಚೆನ್ನಾಗಿ ಪ್ರಾರಂಭಿಸಬೇಕು, ಅವರು ಸಾಕಷ್ಟು ಸಕಾರಾತ್ಮಕತೆಯೊಂದಿಗೆ ಪಂದ್ಯಕ್ಕಿಳಿಯುವುದು ಅವಶ್ಯಕ. ಆಸ್ಟ್ರೇಲಿಯಾದ ದುರ್ಬಲ ಅಂಶವೆಂದರೆ ಅವರ ಬ್ಯಾಟಿಂಗ್ ಎಂದು ಇದೇ ವೇಳೆ ಭಾರತ ತಂಡಕ್ಕೆ ಟಿಪ್ಸ್​ ಸಹ ನೀಡಿದ್ದಾರೆ.
ತಂಡಕ್ಕೆ ಸಕಾರಾತ್ಮಕ ಸಲಹೆ ನೀಡಿರುವ ಅವರು, ಕಳಪೆ ಮೊತ್ತಕ್ಕೆ ಔಟಾದಾಗ ಅಭಿಮಾನಿಗಳ ಸಲಹೆ ಕಾಮನ್​ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.

ABOUT THE AUTHOR

...view details