ಕರ್ನಾಟಕ

karnataka

ETV Bharat / sports

ಕೆ ಎಲ್ ರಾಹುಲ್, ರಿಷಬ್ ಪಂತ್‌ ಅಪಾಯಕಾರಿ.. ಅಡಿಲೇಡ್‌ನಂತೆ ಸೋಲು ಮರುಕಳಿಸದು: ಆಸೀಸ್‌ ನಾಯಕ

ಕೆ ಎಲ್ ರಾಹುಲ್ ಹಾಗೂ ರಿಷಭ್‌ ಪಂತ್ ತಂಡ ಸೇರಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಇಬ್ಬರು ಕೂಡ ಅಪಾಯಕಾರಿ ಆಟಗಾರರಾಗಿದ್ದಾರೆ. ಪಂದ್ಯ ಮುನ್ನಡೆಸುವ ಕೌಶಲ್ಯ ಹೊಂದಿದ್ದಾರೆ. ನಾವು ಒಂದು ವೇಳೆ ಒಂದು ಇಂಚು ದಾರಿ ಮಾಡಿಕೊಟ್ಟರೆ ಇವರು ಪಂದ್ಯವನ್ನು ಮೈಲುಗಟ್ಟಲೆ ದೂರ ತೆಗೆದುಕೊಂಡು ಹೋಗಬಲ್ಲರು..

Tim Paine
ಟಿಮ್ ಪೈನ್

By

Published : Dec 25, 2020, 11:25 AM IST

ಮೆಲ್ಬರ್ನ್‌ :ಹೆಮ್ಮೆಯ ಕ್ರಿಕೆಟ್‌ ದೇಶ ಭಾರತ. ಅಡಿಲೇಡ್‌ನಂತೆ ಎಂಸಿಜಿ ಮೈದಾನದಲ್ಲಿ ಸೋಲಲಾರದು ಎಂದು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್‌ ಹೇಳಿದ್ದಾರೆ.

ನಾಳೆಯಿಂದ ಇಲ್ಲಿನ ಎಂಸಿಜಿ (ಮೆಲ್ಬರ್ನ್‌ ಕ್ರಿಕೆಟ್ ಗ್ರೌಂಡ್‌)ನಲ್ಲಿ ಭಾರತ-ಆಸೀಸ್ ನಡುವೆ ಎರಡನೇ ಬಾಕ್ಸಿಂಗ್‌ ಡೇ ಟೆಸ್ಟ್ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ನಡೆದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಪೈನ್‌ ಮಾತನಾಡಿದರು.

ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಭಾರತೀಯ ತಂಡ ಕೇವಲ 36 ರನ್ನುಗಳಿಗೆ ಆಲೌಟಾಗಿ ಹೀನಾಯ ಸೋಲು ಕಂಡಿತ್ತು. ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಅಜಿಂಕ್ಯ ರಹಾನೆ ಮುನ್ನಡೆಸುತ್ತಿದ್ದಾರೆ. ಆದರೆ, ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಆಸ್ಟೇಲಿಯಾ ತಂಡ, ಭಾರತೀಯ ತಂಡವನ್ನು ಅಷ್ಟೊಂದು ಸುಲಭವಾಗಿ ಪರಿಗಣಿಸಿಲ್ಲ. 'ಭಾರತೀಯ ತಂಡದಲ್ಲಿ ಅದ್ಭುತ ಪ್ರತಿಭೆಯಿರುವ ಹಾಗೂ ಅಪಾಯಕಾರಿ ಟೆಸ್ಟ್ ಆಟಗಾರರಿದ್ದಾರೆ' ಎಂದು ಪೈನ್‌ ಹೇಳಿದ್ದಾರೆ.

ಇದನ್ನೂ ಓದಿ: ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ವಿಶ್ವಕಪ್ ಹ್ಯಾಟ್ರಿಕ್ ಹೀರೋ ಚೇತನ್​ ಶರ್ಮಾ ನೇಮಕ

ಆಸ್ಟ್ರೇಲಿಯಾ ಟಿ-ಟ್ವೆಂಟಿ ಟೆಸ್ಟ್‌ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿರುವ ಪೈನ್‌, ಕಳೆದ ವರ್ಷ ನಡೆದ ಇಂಗ್ಲೆಂಡ್ ವಿರುದ್ಧ ಪಂದ್ಯಾವಳಿಗಳನ್ನು ನೆನಪಿಸಿದ್ದಾರೆ. ಆಂಗ್ಲರ ತಂಡ 5ನೇ ಟೆಸ್ಟ್‌ ಪಂದ್ಯದಲ್ಲಿ ಬೌನ್ಸ್‌ ಬ್ಯಾಕ್‌ ಮಾಡಿ ಸರಣಿ ಸಮಬಲಗೊಳಿಸಿದ್ದರು. ಹಾಗಾಗಿ, ಟಿಮ್‌ ಬಳಗ ಮುನ್ನೆಚ್ಚರಿಕೆ ವಹಿಸಬೇಕಿದೆ.

ಬಾಕ್ಸಿಂಗ್‌ ಡೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ವೇಗಿ ಮಹಮ್ಮದ್ ಶಮಿ ಪಾಲ್ಗೊಳ್ಳುತ್ತಿಲ್ಲ. ಹಾಗಾಗಿ, ಟೀಂ ಇಂಡಿಯಾದಲ್ಲಿ ಪ್ರಮುಖವಾಗಿ ಐದು ಆಟಗಾರರ ಬದಲಾವಣೆ ಆಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೈನ್, 'ಕೆ ಎಲ್ ರಾಹುಲ್ ಹಾಗೂ ರಿಷಭ್‌ ಪಂತ್ ತಂಡ ಸೇರಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ಇಬ್ಬರು ಕೂಡ ಅಪಾಯಕಾರಿ ಆಟಗಾರರಾಗಿದ್ದಾರೆ. ಪಂದ್ಯವನ್ನು ಮುನ್ನಡೆಸುವ ಕೌಶಲ್ಯ ಹೊಂದಿದ್ದಾರೆ. ನಾವು ಒಂದು ವೇಳೆ ಒಂದು ಇಂಚು ದಾರಿ ಮಾಡಿಕೊಟ್ಟರೆ ಇವರು ಪಂದ್ಯವನ್ನು ಮೈಲುಗಟ್ಟಲೆ ದೂರ ತೆಗೆದುಕೊಂಡು ಹೋಗಬಲ್ಲರು. ಈ ನಿಟ್ಟಿನಲ್ಲಿ ನಾವು ಜಾಗರೂಕರಾಗಿದ್ದೇವೆ' ಎಂದು ಪೈನ್‌ ಹೇಳಿದ್ದಾರೆ.

ABOUT THE AUTHOR

...view details