ಕರ್ನಾಟಕ

karnataka

ETV Bharat / sports

ಸುನಿಲ್ ಗವಾಸ್ಕರ್ ರೆಕಾರ್ಡ್​ ಬ್ರೇಕ್​ ಮಾಡಿದ ಶುಬ್ಮನ್ ಗಿಲ್.. ಏನದು ದಾಖಲೆ? - ಸುನಿಲ್ ಗವಾಸ್ಕರ್

ಬ್ರಿಸ್ಬೇನ್‌ನ ಗಬ್ಬಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಅದ್ಭುತ ಅರ್ಧಶತಕ ಗಳಿಸಿದರು. ಅವರು ಈ ಇನ್ನಿಂಗ್ಸ್​​ನಲ್ಲಿ 146 ಎಸೆತ ಎದುರಿಸಿದ ಅವರು 8 ಬೌಂಡರಿ ಹಾಗೂ 2 ಸಿಕ್ಸರ್​ ಸಹಾದಿಂದ 91 ರನ್​​ ಗಳಿಸಿ ಔಟಾಗುವ ಮೂಲಕ, ಚೊಚ್ಚಲ ಶತಕ ಸಿಡಿಸುವಲ್ಲಿ ವಿಫಲರಾದರು.

Shubman Gill
ಶುಬ್ಮನ್ ಗಿಲ್

By

Published : Jan 19, 2021, 10:08 AM IST

ನವದೆಹಲಿ:ತಮ್ಮ ಕಿರಿಯ ವಯಸ್ಸಿನಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿರುವ ಶುಬ್ಮನ್ ಗಿಲ್ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಓಪನರ್ ಎಂಬ ಹೆಗ್ಗಳಿಕೆಗೆ ಶುಬ್ಮನ್ ಗಿಲ್ ಪಾತ್ರರಾಗಿದ್ದಾರೆ.

ಬ್ರಿಸ್ಬೇನ್‌ನ ಗಬ್ಬಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಅದ್ಭುತ ಅರ್ಧಶತಕ ಗಳಿಸಿದರು. ಅವರು ಈ ಇನ್ನಿಂಗ್ಸ್​​ನಲ್ಲಿ 146 ಎಸೆತ ಎದುರಿಸಿದ ಅವರು 8 ಬೌಂಡರಿ ಹಾಗೂ 2 ಸಿಕ್ಸರ್​ ಸಹಾಯದಿಂದ 91 ರನ್​​ ಗಳಿಸಿ ಔಟಾಗುವ ಮೂಲಕ, ಚೊಚ್ಚಲ ಶತಕ ಸಿಡಿಸುವಲ್ಲಿ ವಿಫಲರಾದರು.

ಈ ಪಂದ್ಯದ 4ನೇ ಇನ್ನಿಂಗ್ಸ್​​ನಲ್ಲಿ ಅರ್ಧಶತಕ ಸಿಡಿಸುವ ಮೂಲಕ ಸುನಿಲ್ ಗವಾಸ್ಕರ್ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು. 1970–71ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಅಜೇಯ 67 ರನ್ ಗಳಿಸಿ ದಾಖಲೆ ಬರೆದಿದ್ದರು. ಆಗ ಗವಾಸ್ಕರ್​ ವಯಸ್ಸು 21 ವರ್ಷ 243 ದಿನಗಳಾಗಿದ್ದವು.

ಓದಿ : ಕುತೂಹಲ ಮೂಡಿಸಿದ ಕೊನೆಯ ದಿನದಾಟ: ಗಿಲ್ ಗುದ್ದಿಗೆ ಕಾಂಗರೂ ಪಡೆ ಹೈರಾಣು

ABOUT THE AUTHOR

...view details