ಕರ್ನಾಟಕ

karnataka

ETV Bharat / sports

ನಟರಾಜನ್, ಸೈನಿಗಿಂತ ಶಾರ್ದೂಲ್​​‌ಗೆ 11ರ ಬಳಗದಲ್ಲಿ ಸ್ಥಾನ ಕೊಟ್ಟರೆ ಉತ್ತಮ: ದಿನೇಶ್​ ಲಾಡ್ - Australia vs India

ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿರುವ ಉಮೇಶ್ ಯಾದವ್​ ಸ್ಥಾನದ ಬದಲಿಗೆ ಮೂರನೇ ವೇಗಿಯಾಗಿ ಮೂರನೇ ಟೆಸ್ಟ್​ ಪಂದ್ಯಕ್ಕೆ ಆಸ್ಟ್ರೇಲಿಯಾ ವಿರುದ್ಧ ಆಡುವ 11ರ ಬಳಗದಲ್ಲಿ ಶಾರ್ದೂಲ್​​ ಹೆಸರು ಇದ್ದರೆ ಉತ್ತಮ ಎಂದು ಠಾಕೂರ್​ ಬಾಲ್ಯದ ಕೋಚ್​​​ ದಿನೇಶ್​ ಲಾಡ್ ಸಲಹೆ ನೀಡಿದ್ದಾರೆ.

I prefer Shardul over Natarajan and Saini'
ನಟರಾಜನ್, ಸೈನಿ, ಶಾರ್ದೂಲ್

By

Published : Jan 5, 2021, 9:30 PM IST

ಹೈದರಾಬಾದ್​:ಕಳೆದ ಮೂರು ವರ್ಷಗಳಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಎ ಮತ್ತು ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶಾರ್ದೂಲ್​​​ ಠಾಕೂರ್​​ ಅವರನ್ನು ಭಾರತ ತಂಡದ ಮೂರನೇ ವೇಗಿಯಾಗಿ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಬಾಲ್ಯದ ಕೋಚ್​​​ ದಿನೇಶ್​ ಲಾಡ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮೂರನೇ ಟೆಸ್ಟ್​ ಪಂದ್ಯಕ್ಕಾಗಿ ನವದೀಪ್​ ಸೈನಿ, ನಟರಾಜನ್​ ಮತ್ತು ಠಾಕೂರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಮೂವರಲ್ಲಿ ಯಾರಿಗೆ ಆದ್ಯತೆ ನೀಡಬೇಕೆಂಬ ಪ್ರಶ್ನೆಗೆ ಉತ್ತರಿಸಿದ ಲಾಡ್​​, ಠಾಕೂರ್​​ ದೇಶೀಯ ಕ್ರಿಕೆಟ್‌ನಲ್ಲಿ ಕೆಂಪು ಚೆಂಡಿನೊಂದಿಗೆ ಉತ್ತಮ ಪ್ರದರ್ಶನ ತೋರಿದ್ದಾರೆ. ರಣಜಿ ಟ್ರೋಫಿಯಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಪಡೆದಿದ್ದಾರೆ. ನಟರಾಜನ್, ಸೈನಿಗಿಂತ ಶಾರ್ದೂಲ್​​‌ಗೆ ಹೆಚ್ಚು ಆದ್ಯತೆ ನೀಡುತ್ತೇನೆ. ಆಡುವ 11ರ ಬಳಗಕ್ಕೆ ಶಾರ್ದೂಲ್​ ಠಾಕೂರ್​ ಆಯ್ಕೆ ಉತ್ತಮ ಎಂದರು.

ಇದನ್ನೂ ಓದಿ...3ನೇ ಟೆಸ್ಟ್​ಗೆ ಶಾರ್ದುಲ್ ಅಥವಾ ಸೈನಿ? ಗೊಂದಲದಲ್ಲಿ ಟೀಮ್ ಮ್ಯಾನೇಜ್​ಮೆಂಟ್​

ಠಾಕೂರ್​​ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಲವು ಕಾರಣಗಳನ್ನು ನೀಡಲು ಇಚ್ಛಿಸುತ್ತೇನೆ. ಹೊಸ ಚೆಂಡನ್ನು ಸ್ವಿಂಗ್ ಮಾಡುವುದು ಹೇಗೆಂದು ಅವರಿಗೆ ಗೊತ್ತಿದೆ.​​​ ಈಗಾಗಲೇ ಅವರು​ ಆಸ್ಟ್ರೇಲಿಯಾದಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಅಲ್ಲಿ ಯಶಸ್ವಿಯೂ ಆಗಿದ್ದಾರೆ. ಅವರು 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ ಎಂದರು. ಮೂರನೇ ಟೆಸ್ಟ್ ಪಂದ್ಯ ಜ. 7ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಬೆಳಗ್ಗೆ 5 ಗಂಟೆಗೆ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ.

ಸರಣಿಗೂ ಮೊದಲು ಅನುಭವಿ ಇಶಾಂತ್​ ಶರ್ಮಾ ತಂಡದಿಂದ ಹೊರಬಿದ್ದರು. ಮೊದಲ ಟೆಸ್ಟ್​ ಪಂದ್ಯ ಸೋತ ನಂತರ ಮೊಹಮ್ಮದ್​ ಶಮಿ ಗಾಯಗೊಂಡರು. ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ಉಮೇಶ್ ಯಾದವ್​​ ಈಗ ಗಾಯದಿಂದ ಬಳಲುತ್ತಿದ್ದಾರೆ. ಈಗವರ ಸ್ಥಾನವನ್ನು ಎಡಗೈ ವೇಗಿ ಟಿ.ನಟರಾಜನ್​ ತುಂಬಲಿದ್ದಾರೆ ಎಂದು ಈಗಾಗಲೇ ಬಿಸಿಸಿಐ ಹೇಳಿದೆ. ಈ ಮೂಲಕ ಪದಾರ್ಪಣೆ ಕೂಡ ಮಾಡಲಿದ್ದಾರೆ. ಅಲ್ಲದೆ,​ ಮುಂದಿನ ಟೆಸ್ಟ್​ ಪಂದ್ಯಕ್ಕೆ ಮೂರನೇ ವೇಗಿಯಾಗಿ ಸೈನಿ ಅಥವಾ ಶಾರ್ದೂಲ್​ರನ್ನು ಕಣಕ್ಕಿಳಿಸುವ ಚಿಂತನೆ ಬಿಸಿಸಿಐ ನಡೆಸಿದೆ.

ABOUT THE AUTHOR

...view details