ಬ್ರಿಸ್ಬೇನ್: ಗಬ್ಬಾದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಯುವ ಆಟಗಾರ ಶುಬ್ಮನ್ ಗಿಲ್ ಆಟಕ್ಕೆ ವಿ.ವಿ.ಎಸ್. ಲಕ್ಷ್ಮಣ್ ಫಿದಾ ಆಗಿದ್ದಾರೆ.
ಈ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಗಿಲ್ 146 ಎಸೆತ ಎದುರಿಸಿ, 8 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 91 ರನ್ ಗಳಿಸಿ ಔಟಾಗುವ ಮೂಲಕ, ಚೊಚ್ಚಲ ಶತಕವನ್ನ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು. ಆದರೆ, ಇವರ ಆಟ್ ಟೀಂ ಇಂಡಿಯಾಗೆ ಭದ್ರ ಬುನಾದಿ ಹಾಕಿ ಕೊಟ್ಟಿತು.
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ " ಯುವ ಆಟಗಾರ ಶುಬ್ಮನ್ ಗಿಲ್ ಅದ್ಭುತವಾಗಿ ಆಡಿದ್ದಾರೆ. ಆದರೆ, ಪೂಜಾರ ಕೊಂಚ ಧೈರ್ಯ ತೋರಬೇಕು. ಈಗಾಗಲೆ ಆಸ್ಟ್ರೇಲಿಯನ್ ಬೌಲಿಂಗ್ ನೋಡಿ ಅವರು ಒತ್ತಡದಲ್ಲಿದ್ದಾರೆ. ಅವರು ಸರಣಿ ಗೆಲ್ಲುವ ಎದೆಗಾರಿಕೆ ತೊರಬೇಕು ಎಂದು ಬರೆದುಕೊಂಡಿದ್ದಾರೆ.
ಗಿಲ್ ಬ್ಯಾಟಿಂಗ್ ಮಾಡಿದ ರೀತಿ ಅವರು ಖಂಡಿತವಾಗಿಯೂ ಒಂದು ಶತಕಕ್ಕೆ ಅರ್ಹರಾಗಿದ್ದಾರೆ. ಆದರೆ, ಅವರ ಭವಿಷ್ಯದಲ್ಲಿ ಇನ್ನೂ ಅದ್ಭುತವಾಗಿ ಆಡುವ ನಿರೀಕ್ಷೆಯಿದೆ. ಅದ್ಭುತ ಪ್ರತಿಭೆ ಮತ್ತು ಮುಖ್ಯವಾಗಿ ಒತ್ತಡವನ್ನು ನಿಭಾಯಿಸುವ ಮಾನಸಿಕ ಶಕ್ತಿ ಹೊಂದಿದ್ದಾರೆ ಎಂದು ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
ಓದಿ : ಟೆಸ್ಟ್ ಕ್ರಿಕೆಟ್ನಲ್ಲಿ ಧೋನಿ ದಾಖಲೆ ಬ್ರೇಕ್ ಮಾಡಿದ ರಿಷಭ್ ಪಂತ್