ಅಡಿಲೇಡ್: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಜೋ ಬರ್ನ್ಸ್ ಅವರು ಭಾರತದ ಆರಂಭಿಕ ಆಟಗಾರ ಪೃಥ್ವಿ ಶಾ ಅವರಿಗೆ ಈಗ ನಾನು ಯಾವುದೇ ಸಲಹೆ ನೀಡುವುದಿಲ್ಲ, ಆದರೆ ಸರಣಿಯ ಕೊನೆಯಾದ ಮೇಲೆ ಕೆಲವು ಸಲಹೆಗಳನ್ನು ಹಂಚಿಕೊಳ್ಳಬಹುದು ಎಂದು ಬರ್ನ್ಸ್ ಹೇಳಿದ್ದಾರೆ.
ಶಾ ಅವರಿಗೆ ಸಲಹೆ ನೀಡಲು ನೀವು ಬಯಸುತ್ತೀರಾ ಎಂದು ಪತ್ರಕರ್ತರೊಬ್ಬರು ಕೇಳಿದಾಗ, ಬರ್ನ್ಸ್, "ನಾನು ಆತನಿಗೆ ಯಾವುದೇ ಸಲಹೆ ನೀಡುವುದಿಲ್ಲ, ನಾನು ಅವರ ವಿರುದ್ಧ ಆಡುತ್ತಿದ್ದೇನೆ. ಅವರು ಮುಂದಿನ ಪಂದ್ಯಗಳಲ್ಲಿ ಯಾವುದೇ ರನ್ ಗಳಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಪ್ರತಿಕ್ರಿಯಿಸಿದರು. ಪೃಥ್ವಿ ಶಾ ಬಗ್ಗೆ ತನಗೆ ಹೆಚ್ಚು ತಿಳಿದಿಲ್ಲ. ಆದರೆ ಪ್ರವಾಸದ ಕೊನೆಯಲ್ಲಿ ಕೆಲವು ಸಲಹೆಗಳನ್ನು ಹಂಚಿಕೊಳ್ಳಬಹುದು ಎಂದು ಬರ್ನ್ಸ್ ಹೇಳಿದ್ದಾರೆ.