ಬ್ರಿಸ್ಬೇನ್: ಭಾರತದ ರಿಷಭ್ ಪಂತ್ ಅವರು ಗೆಲುವಿನ ಕೀಲಿ ಕೈಯನ್ನು ತಮ್ಮ ಕೈ ಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಅಭಿಪ್ರಾಯಪಟ್ಟಿದ್ದಾರೆ. ಅಜಿಂಕ್ಯ ರಹಾನೆ ನೇತೃತ್ವದ ತಂಡವು ನಾಲ್ಕನೇ ಟೆಸ್ಟ್ ಗೆಲ್ಲವ ಹಾದಿಯಲ್ಲಿದೆ ಎಂದು ಹೇಳಿದರು.
ಅಲ್ಲದೆ, ಎರಡನೇ ಅವಧಿಯದಲ್ಲಿ ನಾಥನ್ ಲಿಯಾನ್ ಮತ್ತು ಮಿಚೆಲ್ ಸ್ಟಾರ್ಕ್ ತಮ್ಮ ಬೌಲಿಂಗ್ ಮೂಲಕ "ಗೇಮ್" ಅನ್ನು ಮರಳಿ ತರಬೇಕೆಂದು ವಾರ್ನ್ ಹೇಳಿದ್ದಾರೆ.
"ಈ ಟೆಸ್ಟ್ ಪಂದ್ಯ ಗೆಲ್ಲಲು ಭಾರತವು ಉತ್ತಮ ಹಾದಿಯಲ್ಲಿದೆ. ಭಾರತದ ರಿಷಭ್ ಪಂತ್ ಅವರು ಗೆಲುವಿನ ಕೀಲಿ ಕೈ ತಮ್ಮ ಕೈ ಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಆಸ್ಟ್ರೇಲಿಯಾ ಶಾರ್ಟ್ ಬಾಲ್ ತಂತ್ರಗಳು 40 ನಿಮಿಷ ತಡವಾಗಿತ್ತು. ಲಿಯಾನ್ ಮತ್ತು ಸ್ಟಾರ್ಕ್ ಈ ಸೆಷನ್‌ನಲ್ಲಿ ತಮ್ಮ ಬೌಲಿಂಗ್ ಮೂಲಕ "ಗೇಮ್" ಅನ್ನು ಮರಳಿ ತರಬೇಕು. ಕಮ್ಮಿನ್ಸ್ ಮತ್ತು ಹ್ಯಾಜಲ್‌ವುಡ್ ಒಳ್ಳಯ ಫಾರ್ಮ್ನಲ್ಲಿದ್ದಾರೆ ಅವರಿಗೆ ಇವರು ಸಾಥ್ ನೀಡಬೇಕು ”ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.
ಓದಿ : ಅಂತಿಮ ಟೆಸ್ಟ್ ಪಂದ್ಯ: ಟಿ ವಿರಾಮದ ವೇಳೆಗೆ 183 ರನ್ಗೆ 3 ವಿಕೆಟ್ ಕಳೆದುಕೊಂಡ ಭಾರತ