ಕರ್ನಾಟಕ

karnataka

ETV Bharat / sports

ರಹಾನೆ, ಪೂಜಾರ ಮಾತ್ರವಲ್ಲ ಎಲ್ಲಾ ಆಟಗಾರರು ರನ್​ ಗಳಿಸಬೇಕು: ರವೀಂದ್ರ ಜಡೇಜಾ - ಭಾರತ ಆಸ್ಟ್ರೇಲಿಯಾ 3ನೇ ಟೆಸ್ಟ್​ ಪಂದ್ಯ

ನಾವು ಜವಾಬ್ದಾರಿಯುತವಾಗಿ ಆಡಿದರೆ ರನ್​ ಗಳಿಸುವುದು ಸುಲಭ. ಪಂದ್ಯದಲ್ಲಿ ನಮ್ಮ ಸ್ಥಾನ ಬಲಪಡಿಸಿಕೊಳ್ಳಬೇಕಾದರೆ ತಂಡದ ಎಲ್ಲರ ಕೊಡುಗೆ ಅಗತ್ಯ. ಎರಡನೇ ದಿನದಲ್ಲಿ ಬ್ಯಾಟ್ಸ್​​​ಮನ್​​ಗಳ ಮೇಲೆ ಒತ್ತಡ ಹೇರುವುದು ಮತ್ತು ಡಾಟ್​​​​​ ಬಾಲ್​ ಆಡಿಸುವುದಷ್ಟೇ ನಮ್ಮ ಗಮನದಲ್ಲಿತ್ತು ಎಂದಿದ್ದಾರೆ.

Rahane, Pujara
ರಹಾನೆ, ಪೂಜಾರ

By

Published : Jan 8, 2021, 8:25 PM IST

ಸಿಡ್ನಿ (ಆಸ್ಟ್ರೇಲಿಯಾ):ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ಉತ್ತಮ ರನ್​ ಗಳಿಸಲು ಎಲ್ಲಾ ಬ್ಯಾಟ್ಸ್​​​ಮನ್​​ಗಳ ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ಆಲ್​​​ರೌಂಡರ್ ರವೀಂದ್ರ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.

2ನೇ ದಿನದಾಟದ ಅಂತ್ಯದ ವೇಳೆ ಭಾರತ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದೆ. ನಾಯಕ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ ಪೂಜಾರ ಕ್ರೀಸ್​​ ಕಾಯ್ದುಕೊಂಡಿದ್ದಾರೆ.

ರವೀಂದ್ರ ಜಡೇಜಾ ಪ್ರತಿಕ್ರಿಯೆ

ದಿನದಾಟ ಅಂತ್ಯದ ಬಳಿಕ ಮಾತನಾಡಿರುವ ಜಡೇಜಾ, ಆತಿಥೇಯರ ಮುಂದೆ ಉತ್ತಮ ರನ್ ಕಲೆಹಾಕಲು ಬಯಸಿದರೆ ಪೂಜಾರ, ರಹಾನೆ ಮಾತ್ರವಲ್ಲ, ಎಲ್ಲಾ ಆಟಗಾರರು ರನ್​ ಗಳಿಸಬೇಕಾಗುತ್ತದೆ ಎಂದಿದ್ದಾರೆ.

ನಾವು ಜವಾಬ್ದಾರಿಯುತವಾಗಿ ಆಡಿದರೆ ರನ್​ ಗಳಿಸುವುದು ಸುಲಭ. ಪಂದ್ಯದಲ್ಲಿ ನಮ್ಮ ಸ್ಥಾನ ಬಲಪಡಿಸಿಕೊಳ್ಳಬೇಕಾದರೆ ತಂಡದ ಎಲ್ಲರ ಕೊಡುಗೆ ಅಗತ್ಯ. ಎರಡನೇ ದಿನದಲ್ಲಿ ಬ್ಯಾಟ್ಸ್​​​ಮನ್​​ಗಳ ಮೇಲೆ ಒತ್ತಡ ಹೇರುವುದು ಮತ್ತು ಡಾಟ್​​​​​ ಬಾಲ್​ ಆಡಿಸುವುದಷ್ಟೇ ನಮ್ಮ ಗಮನದಲ್ಲಿತ್ತು ಎಂದಿದ್ದಾರೆ.

ಇದನ್ನೂ ಓದಿ: ಅಶ್ವಿನ್ ಮೇಲೆ ಒತ್ತಡ ಹೇರಿ ಬ್ಯಾಟಿಂಗ್ ಮಾಡಿದ್ದು ಫಲ ನೀಡಿತು.. ಸ್ಟೀವ್​ ಸ್ಮಿತ್​​

ABOUT THE AUTHOR

...view details