ಹೌದು, ಆಸ್ಟ್ರೇಲಿಯಾದ ಕ್ರಿಕೆಟಿಗರಾದ ರಿಕಿ ಪಾಟಿಂಗ್ ಮತ್ತು ಶೇನ್ ವಾರ್ನ್ ಅವರು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ. ಪಂದ್ಯಾವಳಿಯ ಟಿಕೆಟ್‌ನಿಂದ ಸಂಗ್ರಹಿಸಿದ ಹಣವು ಆಸ್ಟ್ರೇಲಿಯಾದ ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಮನೆಗಳ ಪುನರ್ವಸತಿಗೆ ಬಳಸಲು ನಿರ್ಧರಿಸಿದ್ದಾರೆ.
ಬುಷ್‌ಫೈರ್ ಕ್ರಿಕೆಟ್ ಬ್ಯಾಷ್: ಆಸ್ಟ್ರೇಲಿಯಾ ತಂಡಕ್ಕೆ ಕೋಚ್ ಆದ ಮಾಸ್ಟರ್ ಬ್ಲಾಸ್ಟರ್! - ಆಸ್ಟ್ರೇಲಿಯಾ ತಂಡಕ್ಕೆ ಸಚಿನ್ ತೆಂಡೂಲ್ಕರ್ ಕೋಚ್
ಕ್ರಿಕೆಟ್ನಲ್ಲಿ ಸಾಮಾನ್ಯವಾಗಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಬಿಗ್ ಫೈಟ್ ನಡೆಯುತ್ತಿರುತ್ತಿದೆ. ಮೈದಾನದಲ್ಲಿ ಗೆಲುವಿಗಾಗಿ ಎರಡೂ ತಂಡಗಳ ನಡುವೆ ಕಾದಾಟ ಇದ್ದಿದ್ದೇ. ಆದ್ರೆ, ಮೊದಲ ಬಾರಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ತಂಡದ ಕೋಚ್ ಆಗಲಿದ್ದಾರೆ. ಆದರೆ ಇದು ಅಂತರರಾಷ್ಟ್ರೀಯ ಪಂದ್ಯವಲ್ಲ.

ಸಂಗ್ರಹ ಚಿತ್ರ
ಇನ್ನು ರಿಕಿ ಪಾಟಿಂಗ್ ಮತ್ತು ಶೇನ್ ವಾರ್ನ್ ಯೋಚನೆಗೆ ಸಚಿನ್ ಕೂಡ ಕೈ ಜೋಡಿಸಿದ್ದಾರೆ. ಫೆಬ್ರವರಿ 8 ರಂದು ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ನಡೆಯಲಿದ್ದು, ರಿಕಿ ಪಾಟಿಂಗ್ ತಂಡಕ್ಕೆ ಸಚಿನ್ ಕೋಚ್ ಆದ್ರೆ, ಶೇನ್ ವಾರ್ನ್ ತಂಡಕ್ಕೆ ವೆಸ್ಟ್ ಇಂಡೀಸ್ ಕೌರ್ಟ್ನಿ ವಾಲ್ಷ್ ತರಬೇತಿ ನೀಡಲಿದ್ದಾರೆ.