ಹೈದರಾಬಾದ್:ಎದುರಾಳಿ ತಂಡದ ಬ್ಯಾಟ್ಸ್ಮನ್ಗಳನ್ನು ಮೋಸದ ಬಲೆಗೆ ಬೀಳಿಸಿ ವಿಕೆಟ್ ಕಬಳಿಸುವ ಕಲೆಯನ್ನು ಭಾರತದ ಚಾಣಾಕ್ಷ ವೇಗಿ ಜಸ್ಪ್ರೀತ್ ಬುಮ್ರಾ ಕರಗತ ಮಾಡಿಕೊಂಡಿದ್ದಾರೆ. ಇದರಿಂದ ಬ್ಯಾಟ್ಸ್ಮನ್ಗಳು ಭಯಭೀತರಾಗುತ್ತಾರೆ. ಆದರೆ, ಈ ಕಲೆಯನ್ನು ಮೊದಲು ನಾವು (ಪಾಕ್ ವೇಗಿಗಳು) ಹೊಂದಿದ್ದೆವು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಹೇಳಿದರು.
ನಮ್ಮ ಕಲೆ ಕರಗತ ಮಾಡಿಕೊಂಡ ಬುಮ್ರಾ: ಶೋಯಬ್ ಅಖ್ತರ್ - former cricketer Shoaib Akhtar
ಬುಮ್ರಾ ಕೇವಲ 5 ಸೆಕೆಂಡ್ಗಳಲ್ಲಿ ಬ್ಯಾಟ್ಸ್ಮನ್ಗಳ ಆಟದ ದಿಕ್ಕು ಬದಲಿಸಿ ಮೈದಾನದಿಂದ ಹೊರಗಟ್ಟುವ ಕೌಶಲ್ಯ ಮತ್ತು ಸಾಮರ್ಥ್ಯ ಹೊಂದಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಹೇಳಿದರು.
ಅವರು ಕೇವಲ 5 ಸೆಕೆಂಡ್ಗಳಲ್ಲಿ ಬ್ಯಾಟ್ಸ್ಮನ್ಗಳ ಆಟದ ದಿಕ್ಕು ಬದಲಿಸಿ ಮೈದಾನದಿಂದ ಹೊರಗಟ್ಟುವ ಕೌಶಲ್ಯ ಮತ್ತು ಸಾಮರ್ಥ್ಯ ಹೊಂದಿದ್ದಾರೆ. ಇದು ಪಾಕಿಸ್ತಾನ ಆಟಗಾರರ ಕಲೆಯಾಗಿತ್ತು. ಟ್ರ್ಯಾಕ್ನಲ್ಲಿ ಎಷ್ಟು ಹುಲ್ಲಿದೆ ಎನ್ನುವುದಕ್ಕಿಂತ ಗಾಳಿಯ ವೇಗ ಮತ್ತು ಅದರ ದಿಕ್ಕನ್ನು ಪರಿಶೀಲಿಸುವುದೇ ಇದರ ತಂತ್ರ. ಇದನ್ನು ಬಳಸಿದವರಲ್ಲಿ ಬಹುಶಃ ಬುಮ್ರಾ ಭಾರತದ ಮೊದಲ ಬೌಲರ್ ಎಂದರು.
ನಾನು, ವಾಸಿಂ ಅಕ್ರಮ್ ಮತ್ತು ವಾಕರ್ ಯೂನಿಸ್ ಬೌಲಿಂಗ್ ಎಸೆಯುವ ಸಮಯದಲ್ಲಿ ಗಾಳಿಯ ವೇಗ ಎಷ್ಟಿದೆ. ಅದರ ದಿಕ್ಕು ಎತ್ತಕಡೆ ಸಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೆವು. ಆ ಗಾಳಿಯ ವೇಗಕ್ಕೆ ತಕ್ಕಂತೆ ಚೆಂಡು ಎಸೆಯುತ್ತಿದ್ದೆವು. ಇದರಿಂದ ಬ್ಯಾಟ್ಸ್ಮನ್ ಕಕ್ಕಾಬಿಕ್ಕಿಯಾಗುತ್ತಿದ್ದರು. ಚೆಂಡನ್ನು ಹೇಗೆ ಎದುರಿಸಬೇಕೆಂದು ಗೊಂದಲಕ್ಕೆ ಒಳಗಾಗುತ್ತಿದ್ದರು ಎಂದು ಹೇಳಿದರು.