ಕರ್ನಾಟಕ

karnataka

By

Published : Nov 20, 2020, 6:47 PM IST

ETV Bharat / sports

ಭಾರತ-ಆಸೀಸ್‌ ಪಂದ್ಯಗಳ ಭವಿಷ್ಯ ನಿರ್ಧರಿಸಲಿರುವ ವೇಗದ ಬೌಲರ್‌ಗಳು: ಜಹೀರ್​​​ ಖಾನ್​

ಭಾರತೀಯ ಕ್ರಿಕೆಟ್ ತಂಡವು ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಮೂರು ಏಕದಿನ, ಮೂರು ಟಿ20 ಮತ್ತು 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನವೆಂಬರ್ 27ರಿಂದ ಏಕದಿನ ಸರಣಿ ಪ್ರಾರಂಭಗೊಳ್ಳಲಿದೆ..

Bowlers will decide fate of India-Australia contest, feels Zaheer
ಭಾರತದ ಮಾಜಿ ಎಡಗೈ ವೇಗಿ ಜಹೀರ್​​ ಖಾನ್​​

ಮುಂಬೈ:ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವೆ ಜರುಗುವ ಪಂದ್ಯಗಳ ಭವಿಷ್ಯವನ್ನು ಉಭಯ ತಂಡಗಳಲ್ಲಿರುವ ವಿಶ್ವದ ಅತ್ಯುತ್ತಮ ಬೌಲರ್​ಗಳು ನಿರ್ಧರಿಸುತ್ತಾರೆ ಎಂದು ಭಾರತದ ಮಾಜಿ ಎಡಗೈ ವೇಗಿ ಜಹೀರ್​​ ಖಾನ್​​ ಅಭಿಪ್ರಾಯಪಟ್ಟರು.

ಎರಡೂ ತಂಡಗಳಲ್ಲಿ ಜಸ್​​ಪಿತ್​ ಬೂಮ್ರಾ, ಮೊಹಮ್ಮದ್ ಶಮಿ, ಮಿಚೆಲ್​​ ಸ್ಟಾರ್ಕ್​, ಪ್ಯಾಟ್​ ಕಮಿನ್ಸ್ ಅವರಂತಹ ಪ್ರಖ್ಯಾತ ಬೌಲರ್​​ಗಳನ್ನು ಹೊಂದಿವೆ. ಅವರು ಎದುರಾಳಿ ಬ್ಯಾಟ್ಸ್​​ಮನ್ಸ್​​ಗಳಿಗೆ ನಡುಕ ಹುಟ್ಟಿಸಬಲ್ಲಂತವರಾಗಿದ್ದು, ಪಂದ್ಯಗಳ ಭವಿಷ್ಯವನ್ನೇ ಬದಲಿಸಲ್ಲರು​​ ಎಂದರು.

ಆಸ್ಟ್ರೇಲಿಯಾ ಮೈದಾನಗಳ ಪಿಚ್‌ಗಳು ಯಾವಾಗಲೂ ಉತ್ತಮ ಬೌನ್ಸ್ ಮತ್ತು ವೇಗಕ್ಕೆ ಹೆಸರುವಾಸಿ. ಹೀಗಾಗಿ, ಅವರನ್ನು ಪಂದ್ಯದ ಗತಿಯನ್ನೇ ಬದಲಿಸುವ ಬೌಲರ್‌ಗಳು ಎನ್ನುತ್ತಿದ್ದೇನೆ. ಎದುರಾಳಿಯನ್ನು ಕಟ್ಟಿಹಾಕುವ ಮತ್ತು ಕಡಿಮೆ ರನ್​​ ಮೊತ್ತಕ್ಕೆ ನಿರ್ಬಂಧಿಸಲು ಉತ್ತಮವಾಗಿ ಬೌಲ್ ಮಾಡುತ್ತಾರೆ ಎಂದು ಭಾವಿಸುತ್ತೇನೆ ಎಂದು ಜಹೀರ್​ ಹೇಳಿದರು.

ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಉಪಸ್ಥಿತಿಯಿಂದ ಈ ಸರಣಿ ಭಾರತ ಕಠಿಣ ಪರೀಕ್ಷೆ ಎದುರಿಸಲಿದೆ. ಬಾಲ್ ಟ್ಯಾಂಪರಿಂಗ್ ಹಗರಣದಲ್ಲಿ ಇಬ್ಬರೂ ವರ್ಷವಿಡೀ ನಿಷೇಧಕ್ಕೆ ಒಳಗಾಗಿದ್ದರು. 2018-19ರಲ್ಲಿ ಭಾರತವು ತಮ್ಮ ಕೊನೆಯ ಟೆಸ್ಟ್ ಸರಣಿಯನ್ನು ವಾರ್ನರ್ ಮತ್ತು ಸ್ಮಿತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 2-1 ಅಂತರದಿಂದ ಸೋಲಿಸಿತ್ತು.

ಈಗವರು ತಂಡಕ್ಕೆ ಮರಳಿದ್ದಾರೆ. ಭಾರತೀಯ ತಂಡವು ಖಂಡಿತವಾಗಿಯೂ ಕಠಿಣ ಸ್ಪರ್ಧೆಯನ್ನು ಎದುರಿಸಲಿದೆ ಎಂದರು.ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ಕ್ರಿಕೆಟ್​ ತಂಡವು ನವೆಂಬರ್ 27ರಿಂದ ಮೂರು ಏಕದಿನ, ಮೂರು ಟಿ20 ಮತ್ತು 4ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ABOUT THE AUTHOR

...view details