ಸಿಡ್ನಿ (ಆಸ್ಟ್ರೇಲಿಯಾ): ಆಸೀಸ್ ನೆಲದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಬೌಲರ್ಗಳಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ. ದಿನದಾಟ ಆರಂಭಿಸಿದ ಭಾರತದ ಪರವಾಗಿ ಶುಭಮನ್ ಗಿಲ್ ಚೊಚ್ಚಲ ಅರ್ಧ ಶತಕ ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ.
ಈ ನಡುವೆ ನಿನ್ನೆ ಬ್ಯಾಟಿಂಗ್ ಕಾಯ್ದುಕೊಂಡು ಮೈದಾನಕ್ಕಿಳಿದಿದ್ದ ಆಸೀಸ್ನ ಸ್ಟೀವ್ ಸ್ಮಿತ್ ಭರ್ಜರಿ ಶತಕ ಸಿಡಿಸಿ ಆಸ್ಟ್ರೇಲಿಯಾವನ್ನು ಮುನ್ನೂರರ ಗಡಿ ದಾಟಿಸುವಲ್ಲಿ ಪ್ರಮುಖರಾದರು. ರನ್ಔಟ್ಗೆ ಬಲಿಯಾಗಿ ಬಳಿಕ ಮಾತನಾಡಿದ ಸ್ಮಿತ್, ಕಾಲುಗಳ ನಡುವೆ ವೇಗ ಕಾಯ್ದುಕೊಂಡಿದ್ದು, ಅಶ್ವಿನ್ ಬೌಲಿಂಗ್ನಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ್ದು ತವರು ನೆಲದಲ್ಲಿ ಮೂರು ವರ್ಷದ ಬಳಿಕ ಶತಕ ಸಿಡಿಸಲು ಸಹಾಯಕವಾಯಿತು. ಅಶ್ವಿನ್ ಮೇಲೆ ಒತ್ತಡ ಹೇರಿ ಬ್ಯಾಟಿಂಗ್ ಮಾಡಿದ್ದು ಫಲ ನೀಡಿತು ಎಂದಿದ್ದಾರೆ.
ಮೂರನೇ ಟೆಸ್ಟ್ನಲ್ಲಿ ಶತಕ ಸಿಡಿಸಿದ ಕುರಿತು ಸ್ಟೀವ್ ಸ್ಮಿತ್ ಪ್ರತಿಕ್ರಿಯೆ ಮೊದಲೆರಡು ಪಂದ್ಯದಲ್ಲಿ ಕೇವಲ 10 ರನ್ಗಳಿಸಿದ್ದ ಸ್ಮಿತ್, ಮೂರನೇ ಟೆಸ್ಟ್ನಲ್ಲಿ ಪುಟಿದೇಳುವ ವಿಶ್ವಾಸ ಹೊಂದಿದ್ದರು. ಅದರಂತೆ 131 ರನ್ ಗಳಿಸಿ ಆಸೀಸ್ ಬ್ಯಾಟಿಂಗ್ಗೆ ಬಲ ತುಂಬಿದರು. ನಾವು ಈ ದಿನದ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಬ್ಯಾಟ್ಸ್ಮನ್ಗಳಿಗೆ ಒತ್ತಡ ಹಾಕಿದ್ದೇವೆ. ನಮ್ಮ ಹುಡುಗರು ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಶಿಸ್ತಿನಿಂದ ಬೌಲಿಂಗ್ ಮಾಡುತ್ತಿದ್ದಾರೆ ಎಂದಿದ್ದಾರೆ.
ನಾನು ಸ್ಪಲ್ಪ ಹೆಚ್ಚಾಗಿಯೇ ಪಾಸಿಟಿವ್ ಆಗಿರಲು ನಿರ್ಧರಿಸಿದ್ದೆ. ನನಗೆ ಯಾವ ರೀತಿ ಬೇಕೋ ಆ ರೀತಿಯಲ್ಲೇ ಅಶ್ವಿನ್ ಬೌಲಿಂಗ್ ಮಾಡಿದ್ದಾರೆ. ಬೌಲರ್ಗೆ ಹೆಚ್ಚು ಒತ್ತಡ ಹಾಕುವಲ್ಲಿ ಪ್ರಯತ್ನಿಸಿದ್ದೇನೆ. ನನ್ನ ಬ್ಯಾಟಿಂಗ್ ನನಗೆ ಸಂತಸ ತಂದಿದೆ ಎಂದಿದ್ದಾರೆ ಸ್ಮಿತ್.
ಇದನ್ನೂ ಓದಿ:'A star has arrived' ಶುಬ್ಮನ್ ಬ್ಯಾಟಿಂಗ್ ವೈಖರಿಗೆ ವಿವಿಎಸ್, ಕಾರ್ತಿಕ್ ಫಿದಾ!