ಸಿಡ್ನಿ:ನವೆಂಬರ್ 27ರಿಂದ ಆರಂಭವಾಗುವಏಕದಿನ ಮತ್ತು ಟಿ-20 ಪಂದ್ಯ ಸರಣಿ ಮತ್ತು ಸ್ವದೇಶಕ್ಕೆ ಮರಳುವ ಮೊದಲು ನಡೆಯುವ ಮೊದಲ ಟೆಸ್ಟ್ನಲ್ಲಿ ಭಾರತ ತಂಡದ ನಾಯಕವಿರಾಟ್ ಕೊಹ್ಲಿ ವಿರುದ್ಧ ಆಸ್ಟ್ರೇಲಿಯಾ ತಂಡ ಕಠಿಣ ಸವಾಲೊಡ್ಡಲಿದೆ. ಅದಕ್ಕೆ ಕೊಹ್ಲಿಯೇ ನಮಗೆ ಪ್ರೇರಣೆ ಎಂದು ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಹೇಳಿದರು.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದು ನಮ್ಮ ತಂಡಕ್ಕೆ ಹೆಚ್ಚು ಲಾಭ ತಂದುಕೊಡುವ ಸಾಧ್ಯತೆಯೂ ಇದೆ. ಆದರೆ, ಅವರು ಸ್ವದೇಶಕ್ಕೆ ಮರಳುವ ಮುನ್ನ ಜರುಗುವ ಪಂದ್ಯಗಳಲ್ಲಿ ಅವರನ್ನು ಎದುರಿಸಲು ನಮ್ಮದೇ ಆದ ಕಾರ್ಯತಂತ್ರಗಳನ್ನು ರೂಪಿಸಿದ್ದೇವೆ. ಈ ಹಿಂದಿನ ಸರಣಿಗಳಲ್ಲೂ ಕೊಹ್ಲಿ ಹೆಚ್ಚು ರನ್ ಗಳಿಸದಂತೆ ಕಟ್ಟಿಹಾಕಲು ಎಷ್ಟೋ ಯೋಜನೆಗಳನ್ನು ಹಾಕಿಕೊಂಡಿದ್ದೆವು. ಆದರೂ ಅವೆಲ್ಲವನ್ನೂ ಮೀರಿ ಉತ್ತಮ ಪ್ರದರ್ಶನ ತೋರಿದ್ದರು ಎಂದರು.