ಸಿಡ್ನಿ:ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನೆಟ್ ಪ್ರಾಕ್ಟಿಸ್ನಲ್ಲಿ ಬೆವರು ಸುರಿಸಲು ಆರಂಭಿಸಿದೆ. ಈ ನಡುವೆ ಮುಖ್ಯ ಕೋಚ್ ರವಿಶಾಸ್ತ್ರಿ ಫೀಲ್ಡ್ಗೆ ಇಳಿದಿದ್ದು, ಆಟಗಾರರೊಂದಿಗೆ ಕೂಡಿಕೊಂಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಶಾಸ್ತ್ರಿ ‘ಗ್ರೇಟ್ ಟು ಗೆಟ್ ಬ್ಯಾಕ್ ಟು ಬ್ಯುಸಿನೆಸ್’ ( ಅಭ್ಯಾಸಕ್ಕೆ ಮರಳಿರುವುದು ಅದ್ಭುತ ಎನಿಸುತ್ತಿದೆ) ಎಂದು ಸಂತಸ ಹಂಚಿಕೊಂಡಿದ್ದಾರೆ. ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯ, ಮೂರು ಟಿ-20 ಮತ್ತು 4 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ನ.27ರಿಂದ ಪಂದ್ಯಗಳು ಆರಂಭವಾಗಲಿವೆ.