ಕರ್ನಾಟಕ

karnataka

ETV Bharat / sports

ವಿರಾಟ್ ಕೊಹ್ಲಿ ನಾಯಕತ್ವವವನ್ನು ಮತ್ತೊಮ್ಮೆ ಟೀಕಿಸಿದ ಗೌತಮ್ ಗಂಭೀರ್

ಇಂಡಿಯಾಗೆ 6ನೇ ಬೌಲರ್​ ಕೊರತೆ ಕಾಡುತ್ತಿದೆ. 2019ರ ವಿಶ್ವಕಪ್‌ನಿಂದ ಭಾರತಕ್ಕೆ ಈ ಸಮಸ್ಯೆ ಕಾಡುತ್ತಿದೆ. ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡದಿದ್ರೆ, ಆರನೇ ಬೌಲರ್ ಯಾರು? ಎಂಬ ಪ್ರಶ್ನೆಗೆ ಉತ್ತರವಿಲ್ಲ..

AUS vs IND: Can't understand Kohli's captaincy, says Gambhir
ವಿರಾಟ್ ಕೊಹ್ಲಿ

By

Published : Nov 30, 2020, 1:06 PM IST

ನವದೆಹಲಿ :ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಸತತ ಎರಡು ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ 66 ರನ್​ಗಳಿಂದ ಹೀನಾಯ ಸೋಲನುಭವಿಸಿದ್ರೆ, 2ನೇ ಪಂದ್ಯದಲ್ಲಿ 51 ರನ್​ಗಳಿಂದ ಮುಗ್ಗರಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಈಗಾಗಲೇ ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ.

ಈ ಸೋಲಿನ ಹಿನ್ನೆಲೆ ವಿರಾಟ್ ಕೊಹ್ಲಿ ನಾಯಕತ್ವವನ್ನು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಕಿಸಿದ್ದಾರೆ. "ಪ್ರೀಮಿಯರ್ ಫಾಸ್ಟ್ ಬೌಲರ್" ಜಸ್ಪ್ರೀತ್ ಬುಮ್ರಾ ಅವರಿಗೆ ಪಂದ್ಯ ಆರಂಭದಲ್ಲಿ ಹೊಸ ಚಂಡಿನಲ್ಲಿ ಬೌಲಿಂಗ್​ ಮಾಡಲು ಕೇವಲ ಎರಡು ಓವರ್​ ನೀಡುವ ಕೊಹ್ಲಿ ನಿರ್ಧಾರವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಗಂಭೀರ್ ವ್ಯಂಗ್ಯವಾಡಿದ್ದಾರೆ.

"ನನಗೆ ವಿರಾಟ್​ ನಾಯಕತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ರೀತಿಯ ಬ್ಯಾಟಿಂಗ್ ತಂಡವನ್ನು ಕಟ್ಟಿ ಹಾಕಬೇಕಾದ್ರೆ ಪ್ರಧಾನ ಬೌಲರ್​ಗೆ ಪಂದ್ಯದ ಆರಂಭದಲ್ಲಿ ಕೇವಲ ಎರಡು ಓವರ್​​ ನೀಡುತ್ತಿರುವುದು ಏಕೆ ಎಂದು ಅರ್ಥವಾಗುತ್ತಿಲ್ಲ. ಕನಿಷ್ಠ 4 ಓವರ್​ ಬೌಲ್​ ಮಾಡಲು ಅವಕಾಶ ನಿಡಬೇಕು ಎಂದು ಗಂಭೀರ್​ ಹೇಳಿದ್ದಾರೆ.

ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮತ್ತೊಂದು ದಾಖಲೆ ಬರೆದ ರನ್ ಮಷಿನ್ ವಿರಾಟ್ ಕೊಹ್ಲಿ

"ಪ್ರಧಾನ ಬೌಲರ್​ಗೆ ಪಂದ್ಯದ ಆರಂಭದಲ್ಲಿ ಕೇವಲ ಎರಡು ಓವರ್​​ ನೀಡುತ್ತಿದ್ದಾರೆ, ಇದು ಟಿ20 ಕ್ರಿಕೆಟ್‌ನಲ್ಲೂ ಸಾಧ್ಯವಿಲ್ಲ. ನನಗೆ ನಿಜವಾಗಿಯೂ ವಿರಾಟ್​ ನಾಯಕತ್ವವನ್ನು ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಗಂಭೀರ್​ ಹೇಳಿದ್ದಾರೆ.

ಇಂಡಿಯಾಗೆ 6ನೇ ಬೌಲರ್​ ಕೊರತೆ ಕಾಡುತ್ತಿದೆ. 2019ರ ವಿಶ್ವಕಪ್‌ನಿಂದ ಭಾರತಕ್ಕೆ ಈ ಸಮಸ್ಯೆ ಕಾಡುತ್ತಿದೆ. ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡದಿದ್ರೆ, ಆರನೇ ಬೌಲರ್ ಯಾರು? ಎಂಬ ಪ್ರಶ್ನೆಗೆ ಉತ್ತರವಿಲ್ಲ ಎಂದು ಗಂಭೀರ್ ತಿಳಿಸಿದರು.

ಟೀಮ್ ಇಂಡಿಯಾಗೆ ಆಲ್​ರೌಂಡರ್ ಬೌಲರ್​ಗಳ ಅವಶ್ಯಕತೆಯಿದೆ. ಆರನೇ ಬೌಲರ್​ಗಳ ಕೊರತೆಯೇ ಟೀಮ್ ಇಂಡಿಯಾ ಸೋಲಿಗೆ ಕಾರಣವಾಗುತ್ತಿದೆ ಎಂದು ಗೌತಮ್ ಗಂಭೀರ್ ತಿಳಿಸಿದರು.

ABOUT THE AUTHOR

...view details