ಹೈದರಾಬಾದ್:ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗಾವಸ್ಕರ್ ಟ್ರೋಫಿ ಗೆದ್ದು ಹುಟ್ಟೂರಿಗೆ ಆಗಮಿಸಿದ ಸಂದರ್ಭ ರಹಾನೆ ಪತ್ನಿ, ಮಗು, ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ನೆರೆದು ಅವರಿಗೆ ಭರ್ಜರಿ ಸ್ವಾಗತ ಕೋರಿದ್ದರು. ಈ ಸಂದರ್ಭ ಅಭಿಮಾನಿಗಳು ತಂದಿದ್ದ ಕೇಕ್ ಮೇಲೆ ಕಾಂಗರೂ ಪ್ರಾಣಿ ಪ್ರತಿಕೃತಿ ಇತ್ತು. ಆದರೆ, ರಹಾನೆ ಆ ಕೇಕ್ ಕಟ್ ಮಾಡಲು ನಿರಾಕರಿಸಿ, ಮೆಚ್ಚುಗೆಗೆ ಪಾತ್ರರಾದರು.
ಕೇಕ್ ಮೇಲಿತ್ತು ಕಾಂಗರೂ ಪ್ರತಿಕೃತಿ: ಕತ್ತರಿಸಲು ನಿರಾಕರಿಸಿದ ರಹಾನೆಗೆ ಪ್ರಶಂಸೆ - ಕಾಂಗರೂ ಕೇಕ್
ಆಸ್ಟ್ರೇಲಿಯಾ ಆಟಗಾರರನ್ನು ಕಾಂಗರೂಗಳು ಎಂದೇ ಕರೆಯುತ್ತೇವೆ. ಅಲ್ಲದೆ, ಕಾಂಗರೂ ಆ ದೇಶದ ರಾಷ್ಟ್ರೀಯ ಪ್ರಾಣಿಯೂ ಹೌದು. ಹೀಗಾಗಿ, ಕೇಕ್ ಮೇಲಿರುವ ಪ್ರಾಣಿಯನ್ನು ಕತ್ತರಿಸಿದರೆ ನಾವು ಅವರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದಂತಾಗುತ್ತದೆ ಎಂಬ ಉದ್ದೇಶದಿಂದ ರಹಾನೆ ಹಿಂದೆ ಸರಿದಿದ್ದಾರೆ.
ಆಸ್ಟ್ರೇಲಿಯಾ ಆಟಗಾರರನ್ನು ಕಾಂಗರೂಗಳು ಎಂದೇ ಕರೆಯುತ್ತೇವೆ. ಅಲ್ಲದೆ, ಕಾಂಗರೂ ಆ ದೇಶದ ರಾಷ್ಟ್ರೀಯ ಪ್ರಾಣಿಯಾಗಿದೆ. ಹೀಗಾಗಿ, ಕೇಕ್ ಮೇಲಿರುವ ಪ್ರಾಣಿಯನ್ನು ಕತ್ತರಿಸಿದರೆ ನಾವು ಅವರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯದಿಂದ ಅವರು ಹಿಂದೆ ಸರಿದಿದ್ದಾರೆ. ವ್ಯಕ್ತಿಯೊಬ್ಬರು ಕಾಂಗರೂ ಕೇಕ್ ಎಂದು ಜೋರಾಗಿ ಕೂಗಿಕೊಂಡಾಗ ರಹಾನೆ ಕೇಕ್ ಕಟ್ ಮಾಡಲು ನಿರಾಕರಿಸಿದರು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡ ಮುನ್ನಡೆಸಿ ಬಾರ್ಡರ್-ಗಾವಸ್ಕರ್ ಟ್ರೋಫಿ ಜಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.