ಕರ್ನಾಟಕ

karnataka

ETV Bharat / sports

ವೆಲ್ಲಿಂಗ್ಟನ್​ ಟಿ20: ಶುಭಾರಂಭದ ನಿರೀಕ್ಷೆಯಲ್ಲಿ ಹಾರ್ದಿಕ್ ಪಡೆ, ಪಂದ್ಯಕ್ಕೆ ಮಳೆ ಭೀತಿ?

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ನೂತನ ನಾಯಕ ಹಾರ್ದಿಕ್​ ಪಾಂಡ್ಯ, ಉಪನಾಯಕ ರಿಷಭ್​ ಪಂತ್​ ಹಾಗೂ ಯುವ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅಲ್ಲದೇ, ಕೋಚ್​​ ರಾಹುಲ್​ ದ್ರಾವಿಡ್​ ಬದಲಿಗೆ ಸ್ಟ್ಯಾಂಡ್ ಇನ್ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಈ ಸರಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

India to face New Zealand in first T20I in Wellington
ವೆಲ್ಲಿಂಗ್ಟನ್​ ಟಿ20: ಶುಭಾರಂಭದ ನಿರೀಕ್ಷೆಯಲ್ಲಿ ಹಾರ್ದಿಕ್ ಪಡೆ, ಪಂದ್ಯಕ್ಕೆ ವರುಣನ ಭೀತಿ?

By

Published : Nov 18, 2022, 10:07 AM IST

ವೆಲ್ಲಿಂಗ್ಟನ್:ಟಿ20 ವಿಶ್ವಕಪ್​ ಸೆಮಿಫೈನಲ್​ ಮುಖಭಂಗದ ಬಳಿಕ ಭಾರತ ಹಾಗೂ ನ್ಯೂಜಿಲೆಂಡ್​ ನಡುವಿನ ಟಿ20 ಸರಣಿಯು ಇಂದಿನಿಂದ ಆರಂಭವಾಗಲಿದೆ. ನೂತನ ನಾಯಕ ಹಾರ್ದಿಕ್​ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಹಿರಿಯರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದ್ದು, ಮತ್ತೊಂದೆಡೆ ಕೆಲ ಬದಲಾವಣೆಯೊಂದಿಗೆ ಕೇನ್​ ವಿಲಿಯಮ್ಸನ್​ ಕಿವೀಸ್​ ಪಡೆಯನ್ನು ಮುನ್ನಡೆಸಲಿದ್ದಾರೆ.

ವಿಶ್ವಕಪ್ ತಂಡದ ಭಾಗವಾಗಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ಮೊಹಮ್ಮದ್ ಶಮಿ ಮತ್ತು ಆರ್ ಅಶ್ವಿನ್ ಅನುಪಸ್ಥಿತಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್​ ಪ್ರವಾಸಕ್ಕೆ ತೆರಳಿದೆ. ನೂತನ ನಾಯಕ ಹಾರ್ದಿಕ್​ ಪಾಂಡ್ಯ, ಉಪನಾಯಕ ರಿಷಭ್​ ಪಂತ್​ ಹಾಗೂ ಯುವ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅಲ್ಲದೆ, ಕೋಚ್​​ ರಾಹುಲ್​ ದ್ರಾವಿಡ್​ ಬದಲಿಗೆ ಸ್ಟ್ಯಾಂಡ್ ಇನ್ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಈ ಸರಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2020ರಲ್ಲಿ ಈ ಎರಡು ತಂಡಗಳು ಕೊನೆಯ ಬಾರಿಗೆ ನ್ಯೂಜಿಲೆಂಡ್‌ನಲ್ಲಿ ಮುಖಾಮುಖಿಯಾದಾಗ ಭಾರತವು 5-0 ಅಂತರದಿಂದ ಟಿ20 ಸರಣಿ ಜಯಿಸಿತ್ತು. ಆದರೆ ಸದ್ಯ ಎರಡೂ ತಂಡಗಳಲ್ಲಿ ಹಲವಾರು ಬದಲಾವಣೆ ಕಾಣಬಹುದಾಗಿದೆ. ಕಿವೀಸ್​ ತಂಡದಲ್ಲಿ ಫಿನ್​ ಅಲೆನ್​, ಗ್ಲೆನ್​ ಫಿಲಿಪ್ಸ್​ರಂತಹ ಯುವ ಆಟಗಾರರ ಸೇರ್ಪಡೆಯಾಗಿದೆ. ಭಾರತ ತಂಡದಲ್ಲೂ ಸಹ ಇಶಾನ್ ಕಿಶನ್, ಶುಭಮನ್ ಗಿಲ್, ರಿಷಬ್ ಪಂತ್, ದೀಪಕ್ ಹೂಡಾ, ಉಮ್ರಾನ್ ಮಲಿಕ್, ಅರ್ಷ್‌ದೀಪ್ ಸಿಂಗ್, ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್​ರಂತಹ ಯುವಪಡೆ ಇದ್ದು, ಯಾರೆಲ್ಲ 11ರ ಬಳಗದಲ್ಲಿ ಇರಲಿದ್ದಾರೆ ಎಂಬುದು ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ:ಟಿ20ಗೆ ಬ್ಯಾಟ್​ ಬಾಲ್​ ಮಾಡುವ ಸ್ಪೆಷಲಿಸ್ಟ್​ಗಳು ತಂಡಕ್ಕೆ ಅಗತ್ಯ: ವಿವಿಎಸ್​ ಲಕ್ಷ್ಮಣ್​

ಮಳೆ ಸಾಧ್ಯತೆ?:ವೆಲಿಂಗ್ಟನ್​ ಟಿ20 ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಸಂಜೆ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ನ್ಯೂಜಿಲೆಂಡ್ ಹವಾಮಾನ ಇಲಾಖೆ ತಿಳಿಸಿದೆ. ಪಂದ್ಯವು ಸ್ಥಳೀಯ ಕಾಲಮಾನ ರಾತ್ರಿ 7:30ಕ್ಕೆ ಪ್ರಾರಂಭವಾಗಲಿದೆ. ಈ ಸಮಯದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, 82% ತೇವಾಂಶದ ನಿರೀಕ್ಷೆ ಇದೆ. ತಾಪಮಾನವು 17 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ ಎಂದು ತಿಳಿಸಿದೆ.

ಪಿಚ್​​ ರಿಪೋರ್ಟ್​:ವೆಲ್ಲಿಂಗ್ಟನ್‌ ಪಿಚ್​​ ನ್ಯೂಜಿಲೆಂಡ್‌ನ ಹೆಚ್ಚಿನ ಕ್ರಿಕೆಟ್ ಮೈದಾನಗಳಂತೆ ಬೌನ್ಸ್ ಮತ್ತು ವೇಗಿಗಳ ಸ್ವರ್ಗವಾಗಿದೆ. ಇಲ್ಲಿನ ಹವಾಮಾನವು ವಿಶಿಷ್ಟವಾಗಿದ್ದು, ರಭಸವಾಗಿ ಬೀಸುವ ಗಾಳಿಯು ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಪಿಚ್‌ನಲ್ಲಿನ ಬೌನ್ಸ್ ಸ್ಥಿರವಾಗಿ ಇರುವುದರಿಂದ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡುವುದು ಅನಿವಾರ್ಯವಾಗಿದೆ

ಇದನ್ನೂ ಓದಿ:ಕಿವೀಸ್​ ನೆಲದಲ್ಲಿ ಟಿ20 ಸರಣಿಗೆ ಭಾರತ ಭರ್ಜರಿ ತಾಲೀಮು.. ಅವಕಾಶ ಬಳಸಿಕೊಳ್ತಾರಾ ಕಿರಿಯರು?

ಸಂಭಾವ್ಯ ತಂಡಗಳು: ಭಾರತ: ಇಶಾನ್ ಕಿಶನ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್/ಸಂಜು ಸ್ಯಾಮ್ಸನ್/ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ವಿ.ಕೀ), ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್

ನ್ಯೂಜಿಲೆಂಡ್:ಫಿನ್ ಅಲೆನ್, ಡೆವೊನ್ ಕಾನ್ವೇ (ವಿ.ಕೀ), ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಡೆರ್ಲ್​ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಆಡಮ್ ಮಿಲ್ನೆ, ಲಾಕಿ ಫರ್ಗುಸನ್

ಪಂದ್ಯ ಆರಂಭ:ಮಧ್ಯಾಹ್ನ 12.00 ಗಂಟೆ(ಭಾರತೀಯ ಕಾಲಮಾನ)

ಸ್ಥಳ:ಸ್ಕೈ ಸ್ಟೇಡಿಯಂ, ವೆಲ್ಲಿಂಗ್ಟನ್

ಇದನ್ನೂ ಓದಿ:ಭಾರತ ಟಿ20 ತಂಡಕ್ಕೆ ಹಾರ್ದಿಕ್​ ಪಾಂಡ್ಯ ನಾಯಕನಾದರೆ ಉತ್ತಮ: ರವಿಶಾಸ್ತ್ರಿ

ABOUT THE AUTHOR

...view details