ಕರ್ನಾಟಕ

karnataka

ETV Bharat / sports

ಭಾರತಕ್ಕೆ ಆಘಾತ ನೀಡಿದ ಆ್ಯಂಡರ್ಸನ್ : 56ಕ್ಕೆ 4 ವಿಕೆಟ್​ ಕಳೆದುಕೊಂಡ ಕೊಹ್ಲಿ ಟೀಂ

ಜೇಮ್ಸ್​ ಆ್ಯಂಡರ್ಸನ್​ ಒಟ್ಟು 3 ವಿಕೆಟ್​ ಪಡೆದರೆ, ರಾಬಿನ್ಸನ್​ ಒಂದು ವಿಕೆಟ್​ ಪಡೆದರು. ಭಾರತದ ಎಲ್ಲಾ ಬ್ಯಾಟ್ಸ್​ಮನ್​ಗಳು ವಿಕೆಟ್​ ಕೀಪರ್​ ಜೋಸ್​ ಬಟ್ಲರ್​ಗೆ ಕ್ಯಾಚ್​ ನೀಡಿಯೇ ಔಟಾದರು.

India struggling at 56-4 at lunch on day 1
ಭಾರತ vs ಇಂಗ್ಲೆಂಡ್ 3ನೇ ಟೆಸ್ಟ್​

By

Published : Aug 25, 2021, 6:04 PM IST

ಲೀಡ್ಸ್​:ಇಂಗ್ಲೆಂಡ್​ ಎದುರಿನ 3ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಆಘಾತ ಅನುಭಿವಿಸಿದೆ. ಕೇವಲ 56 ರನ್​ ಗಳಿಸುವಷ್ಟರಲ್ಲಿ ಪ್ರಮುಖ ವಿಕೆಟ್​ ಕಳೆದುಕೊಂಡಿದೆ.

ಇದೇ ಮೊದಲ ಬಾರಿಗೆ ಇಂಗ್ಲೆಂಡ್​ನಲ್ಲಿ ಟಾಸ್​ ಗೆದ್ದಿದ್ದ ವಿರಾಟ್​ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಬ್ಯಾಟಿಂಗ್ ಆಗಮಿಸಿದ ರಾಹುಲ್​ ಖಾತೆ ತೆರೆಯುವ ಮುನ್ನವೇ ಜೇಮ್ಸ್​ ಆ್ಯಂಡರ್ಸನ್​ ಬೌಲಿಂಗ್​ನಲ್ಲಿ ಬಟ್ಲರ್​ಗೆ ಕ್ಯಾಚ್​ ನೀಡಿ ಔಟಾದರು.

ನಂತರ ಬಂದ ಪೂಜಾರ (1) ಮತ್ತು ನಾಯಕ ವಿರಾಟ್​ ಕೊಹ್ಲಿ(7) ಕೂಡ ರಾಹುಲ್ ಮಾದರಿಯಲ್ಲಿ ಜೇಮ್ಸ್​ ಆ್ಯಂಡರ್ಸನ್​ಗೆ ವಿಕೆಟ್​ ಒಪ್ಪಿಸಿದರು.

21ಕ್ಕೆ 3 ವಿಕೆಟ್​ ಕಳೆದುಕೊಂಡಿದ್ದ ಸ್ಥಿತಿಯಲ್ಲಿ ರೋಹಿತ್ ಶರ್ಮಾ ಜೊತೆಗೂಡಿದ ಅಜಿಂಕ್ಯ ರಹಾನೆ 4ನೇ ವಿಕೆಟ್​ ಜೊತೆಯಾಟದಲ್ಲಿ 35 ರನ್​ ಸೇರಿಸಿ ಚೇತರಿಕೆ ನೀಡಿದರು. 54 ಎಸೆತಗಳನ್ನೆದುರಿಸಿದ್ದ ರಹಾನೆ 18 ರನ್ ​ಗಳಿಸಿದ್ದ ವೇಳೆ 2ನೇ ಸ್ಪೆಲ್​ ಬೌಲಿಂಗ್ ಮಾಡಲು ಬಂದ ರಾಬಿನ್ಸನ್​ ಬೌಲಿಂಗ್​ನಲ್ಲಿ ಕೀಪರ್​ ಬಟ್ಲರ್​ಗೆ ಕ್ಯಾಚ್​ ನೀಡಿದರು.

ಜೇಮ್ಸ್​ ಆ್ಯಂಡರ್ಸನ್​ ಒಟ್ಟು 3 ವಿಕೆಟ್​ ಪಡೆದರೆ, ರಾಬಿನ್ಸನ್​ ಒಂದು ವಿಕೆಟ್​ ಪಡೆದರು. ಭಾರತದ ಎಲ್ಲಾ ಬ್ಯಾಟ್ಸ್​ಮನ್​ಗಳು ವಿಕೆಟ್​ ಕೀಪರ್​ ಜೋಸ್​ ಬಟ್ಲರ್​ಗೆ ಕ್ಯಾಚ್​ ನೀಡಿಯೇ ಔಟಾದರು.

ಭೋಜನ ವಿರಾಮದ ವೇಳೆಗೆ ಭಾರತ 25.5 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್ ​ಗಳಿಸಿದೆ. ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ 75 ಎಸೆತಗಳಲ್ಲಿ 15 ರನ್ ​ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಲಾರ್ಡ್ಸ್ ಡ್ರೆಸ್ಸಿಂಗ್ ರೂಮ್​ನಲ್ಲೂ ನಡೆದಿತ್ತಂತೆ ಭಾರತ - ಇಂಗ್ಲೆಂಡ್ ಆಟಗಾರರ ನಡುವೆ ದೊಡ್ಡ ಜಗಳ!

ABOUT THE AUTHOR

...view details