ಮೊಹಾಲಿ(ಪಂಜಾಬ್): ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಅತ್ಯದ್ಭುತ ಪ್ರದರ್ಶನ ತೋರುತ್ತಿದೆ.
ಮೊದಲ ಇನ್ನಿಂಗ್ಸ್ನಲ್ಲಿ ರವೀಂದ್ರ ಜಡೇಜಾ ಅಜೇಯ 175 ರನ್ಗಳ ಗಳಿಸಿದ್ದು ಟೀಂ ಇಂಡಿಯಾ ಬರೋಬ್ಬರಿ 574 ರನ್ಗೆ ಡಿಕ್ಲೇರ್ ಘೋಷಿಸಿ ಬೃಹತ್ ಮೊತ್ತ ಕಲೆಹಾಕಿತು. ಮೊದಲ ಇನ್ನಿಂಗ್ಸ್ನಲ್ಲಿ 65 ಓವರ್ನಲ್ಲಿ 174 ರನ್ ಗಳಿಸಿದ ಶ್ರೀಲಂಕಾ ಆಲ್ಔಟ್ ಆಗಿದೆ. ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್‌ನಲ್ಲೂ ರವೀಂದ್ರ ಜಡೇಜಾ ಕಮಾಲ್ ಮಾಡಿ 5 ವಿಕೆಟ್ ಕಬಳಿಸಿದರು.