ಅಹ್ಮದಾಬಾದ್: ಫೆಬ್ರವರಿ 6ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ತಂಡದ ಸದಸ್ಯರು ಅಹ್ಮದಾಬಾದ್ಗೆ ಆಗಮಿಸಿದ್ದಾರೆ. ಎಲ್ಲಾ ಆಟಗಾರರು ಬಯೋಬಬಲ್ ಸೇರಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಸ್ಪಿನ್ನರ್ ಯುಜ್ವೇಂದ್ರ ಚಹಲ್ ವಿಮಾನದಲ್ಲಿ ಶಿಖರ್ ಧವನ್ ಜೊತೆ ಕುಳಿತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ತಾವು ಅಹ್ಮದಾಬಾದ್ಗೆ ತೆರಳುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಈ ಕುರಿತು ಪಿಟಿಐಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಗಳು "ವಿಂಡೀಸ್ ಸರಣಿಗೆ ಆಗಮಿಸಿರುವ ಭಾರತೀಯ ಆಟಗಾರರು 3 ದಿನಗಳ ಕ್ವಾರಂಟೈನ್ಗೆ ಒಳಗಾಗಿದ್ದಾರೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ರೋಹಿತ್ ಸೂಕ್ತ, ರಹಾನೆ ಉತ್ತಮ.. ಆದ್ರೆ ರಾಹುಲ್ಗೆ ಟೆಸ್ಟ್ ನಾಯಕತ್ವದ ಗುಣಗಳಿಲ್ಲ: ಪಾಂಟಿಂಗ್