ದುಬೈ:ಐಸಿಸಿ ಮಹಿಳಾ ಏಕದಿನ ಮತ್ತು ಟಿ 20 ತಂಡದ ರ‍್ಯಾಂಕಿಂಗ್ ಪಟ್ಟಿ ನವೀಕರಿಸಿದ್ದು ಭಾರತ ಎರಡು ಮಾದರಿಯಲ್ಲೂ ನಾಲ್ಕನೇ ಸ್ಥಾನದಲ್ಲಿದೆ. ಭಾರತ ಏಕದಿನ ಶ್ರೇಯಾಂಕದಲ್ಲಿ ಒಂದು ಅಂಕವನ್ನು ಪಡೆದುಕೊಂಡು ಈಗ ಒಟ್ಟು 104 ಅಂಕಗಳನ್ನು ಮತ್ತು ಟಿ20ಯಲ್ಲಿ ನಾಲ್ಕು ಅಂಕಗಳನ್ನು ಗಳಿಸಿ ಈಗ ಒಟ್ಟು 266 ಅಂಕಗಳನ್ನು ಹೊಂದಿದೆ.
ಆಸ್ಟ್ರೇಲಿಯದ ವನಿತೆಯರ ತಂಡ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ದಾಖಲೆ ಬರೆದಿದೆ. ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದಿಂದ 51 ಅಂಕಗಳ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗದಲ್ಲಿ ದಾಖಲೆ ಬರೆದಿದೆ. ಈ ಹಿಂದೆ ಎರಡು ತಂಡಗಳ ನಡುವಿನ ಅಂತರ 48 ಇದ್ದದ್ದು ರೆಕಾರ್ಡ್ ಆಗಿತ್ತು. ಆಸ್ಟ್ರೇಲಿಯ ಏಕ ದಿನದಲ್ಲಿ 170 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದೆ. 119 ಅಂಕಗಳಿಂದ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್(116), ಭಾರತ (104) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ.