ಓವಲ್(ಲಂಡನ್):ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಕೊನೆಯ ದಿನವಾಗಿರುವ ಇಂದು ಭಾರತ ಗೆಲುವಿನ ಸನಿಹ ಬಂದು ತಲುಪಿದೆ. ಭೋಜನ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಇದೀಗ 6 ವಿಕೆಟ್ ನಷ್ಟಕ್ಕೆ 147 ರನ್ಗಳಿಕೆ ಮಾಡಿದೆ.
ಯಾವುದೇ ವಿಕೆಟ್ ನಷ್ಟವಿಲ್ಲದೇ ನಿನ್ನೆ 77 ರನ್ಗಳಿಕೆ ಮಾಡಿದ್ದ ಇಂಗ್ಲೆಂಡ್ ಇಂದು ತನ್ನ ಬ್ಯಾಟಿಂಗ್ ಮುಂದುವರೆಸಿತು. ಆರಂಭಿಕರಾದ ರೋರಿ ಬರ್ನ್ಸ್ 50 ರನ್ ಹಾಗೂ ಡೇವಿಡ್ ಮಲನ್ 5 ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಬರ್ನ್ಸ್ ವಿಕೆಟ್ ಪಡೆದುಕೊಳ್ಳುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿಯಾಗಿದ್ದು, ಮಲನ್ ರನೌಟ್ ಬಲೆಗೆ ಬಿದ್ದರು. ಇದಾದ ಬಳಿಕ ಡೇವಿಡ್ ಮಲನ್ ರನೌಟ್ ಹಾಗೂ ಒಲ್ಲಿ ಪೋಪ್(0) ಬೂಮ್ರಾಗೆ ವಿಕೆಟ್ ಒಪ್ಪಿಸಿದರು.
ಬೋಜನದ ಬೆನ್ನಲ್ಲೇ ಟೀಂ ಇಂಡಿಯಾ ಮೇಲುಗೈ
ಬೋಜನ ವಿರಾಮದ ವೇಳೆಗೆ ಎರಡು ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿದ್ದ ಇಂಗ್ಲೆಂಡ್ಗೆ ಟೀಂ ಇಂಡಿಯಾ ಆಘಾತ ನೀಡಿತು. ಲಂಚ್‌ಬ್ರೇಕ್ ಬಳಿಕ ಮೈದಾನಕ್ಕೆ ಬಂದ ಹಮೀದ್ 63 ರನ್, ಪೋಪ್ 2ರನ್ ಹಾಗೂ ಬೈರ್ಸ್ಟೋವ್ 0 ಹಾಗೂ ಮೊಯಿನ್ ಅಲಿ 0 ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.