ದುಬೈ: ಹರಾರೆಯಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ 3-0 ಅಂತರದ ಜಯ ಸಾಧಿಸಿರುವ ಟೀಮ್ ಇಂಡಿಯಾದ ಏಕದಿನ ಶ್ರೇಯಾಂಕವು 111 ರೇಟಿಂಗ್ ಪಾಯಿಂಟ್‌ಗಳಿಗೆ ಏರಿಕೆಯಾಗಿದ್ದು, ಒಟ್ಟಾರೆ ಏಕದಿನ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಭಾರತ ತಂಡ ಜಿಂಬಾಬ್ವೆ ವಿರುದ್ಧ 13 ರನ್‌ಗಳ ಜಯ ದಾಖಲಿಸಿ ಸರಣಿ ಸ್ವೀಪ್ ಮಾಡಿತ್ತು. ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಗಿಲ್ ಬೌಲರ್‌ಗಳನ್ನು ದಂಡಿಸಿ 140 ರನ್‌ಗಳ ಜೊತೆಯಾಟವಾಡಿ ಗಮನ ಸೆಳೆದಿದ್ದರು.