ಹೈದರಾಬಾದ್: ಭಾರತ ತಂಡ ಟೆಸ್ಟ್ ಮತ್ತು ಟಿ20 ಮಾದರಿಯಲ್ಲಿ ಉತ್ತಮವಾಗಿದೆ. ಆದರೆ, ಕೆಲ ಆಟಗಾರರು ಇದರಲ್ಲಿ ಓವರ್ ರೇಟೆಡ್ ಆಗಿದ್ದಾರೆ. ಕೆಲವರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗುತ್ತಿದೆ. ಇದರಿಂದ ತಂಡದ ಪ್ರದರ್ಶನವು ಈ ಮಟ್ಟಕ್ಕೆ ತಲುಪಿದೆ ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್ ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಕಳಪೆ ಪ್ರದರ್ಶನ ತೋರಿದೆ. 2024ರ ಮೊದಲ ಪಂದ್ಯವಾದ ಎರಡನೇ ಟೆಸ್ಟ್ನ ಆರಂಭಕ್ಕೂ ಮುನ್ನ ಭಾರತ ತಂಡದ ಹಿಂದಿನ ವರ್ಷಗಳ ಸಾಧನೆಯನ್ನು ಪರಿಗಣಿಸಿ ಯೂಟ್ಯೂನ್ ಚಾನೆಲ್ವೊಂಂದರಲ್ಲಿ ಮಾತನಾಡಿದ ಅವರು, "ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿದ್ದಾಗ ನಾವು 2-3 ವರ್ಷಗಳ ಕಾಲ ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ನಾವು ಇಂಗ್ಲೆಂಡ್‌ನಲ್ಲಿಯೂ ಪ್ರಾಬಲ್ಯ ಸಾಧಿಸಿದ್ದೇವೆ, ದಕ್ಷಿಣ ಆಫ್ರಿಕಾದಲ್ಲೂ ಪ್ರಬಲ ಹೋರಾಟ ನಡೆಸಿದ್ದೇವೆ. ಅಲ್ಲದೆ, ಆಸ್ಟ್ರೇಲಿಯಾದಲ್ಲಿ ಗೆಲುವು ಸಾಧಿಸಿದ್ದೇವೆ"ಎಂದು ಹೇಳಿದರು.
ಐಸಿಸಿ ಶ್ರೇಯಾಂಕವನ್ನು ಭಾರತವು ಕಡೆಗಣಿಸುವ ಬಗ್ಗೆ ಶ್ರೀಕಾಂತ್ ಒತ್ತಿ ಹೇಳಿದರು. ಭಾರತ ತಂಡದಲ್ಲಿನ ಹಲವಾರು ಆಟಗಾರರು ಅತಿಯಾಗಿ ಮೌಲ್ಯಮಾಪನಗೊಂಡಿದ್ದಾರೆ ಎಂದು ಪ್ರತಿಪಾದಿಸಿದರು. ಗುಣಮಟ್ಟದ ಆಟಗಾರರನ್ನು ಪ್ರಸ್ತುತ ತಂಡದಿಂದ ಹೊರಗಿಡಲಾಗಿದೆ. ಟೆಸ್ಟ್ ತಂಡದಿಂದ ಕೆಲವರು ಹೊರಗೆ ಕುಳಿತಿದ್ದಾರೆ ಎಂದು ಶ್ರೀಕಾಂತ್ ವಾದಿಸಿದರು.
"ನಾವು ಐಸಿಸಿ ಶ್ರೇಯಾಂಕವನ್ನು ಮರೆತುಬಿಡಬೇಕು. ನಾವು ಯಾವಾಗಲೂ 1-2ನೇ ಸ್ಥಾನದಲ್ಲಿದ್ದೇವೆ. ತಂಡವು ಓವರ್-ರೇಟ್ ಮಾಡಿದ ಕ್ರಿಕೆಟಿಗರು ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡದ ಆಟಗಾರರನ್ನು ಹೊಂದಿರುವ ಸಂಯೋಜನೆಯಾಗಿದೆ. ಕುಲದೀಪ್ ಯಾದವ್ ಅವರಂತಹ ಸಾಕಷ್ಟು ಅವಕಾಶಗಳನ್ನು ಪಡೆಯದ ಆಟಗಾರರೂ ಇದ್ದಾರೆ" ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟರು.