ಕರ್ನಾಟಕ

karnataka

ETV Bharat / sports

ICC Player of the Month : ಕನ್ನಡಿಗ ಮಯಾಂಕ್​ ಅಗರವಾಲ್​ ಸೇರಿ ಮೂವರು ಪ್ಲೇಯರ್ಸ್​ ನಾಮನಿರ್ದೇಶನ

ICC Player of the Month : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಪ್ರತಿ ತಿಂಗಳು ನೀಡುವ 'ತಿಂಗಳ ಐಸಿಸಿ ಪುರುಷರ ಕ್ರಿಕೆಟ್​ ಪ್ರಶಸ್ತಿ'ಗೆ ಕನ್ನಡಿಗ ಮಯಾಂಕ್​ ಅಗರವಾಲ್​ ಹೆಸರು ನಾಮನಿರ್ದೇಶನಗೊಂಡಿದೆ..

Mayank Agarwal
Mayank Agarwal

By

Published : Jan 8, 2022, 6:28 PM IST

ಮುಂಬೈ :ಭಾರತೀಯ ಟೆಸ್ಟ್​ ತಂಡದ ಆರಂಭಿಕ ಆಟಗಾರ, ಕನ್ನಡಿಗ ಮಯಾಂಕ್​ ಅಗರವಾಲ್​ ಸೇರಿದಂತೆ ಮೂವರು ಪ್ಲೇಯರ್ಸ್​ ಡಿಸೆಂಬರ್​ ತಿಂಗಳ ಐಸಿಸಿ ಪುರುಷರ ಕ್ರಿಕೆಟ್​ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಐಸಿಸಿ ಪ್ರತಿ ತಿಂಗಳು ನೀಡುವ 'ತಿಂಗಳ ಆಟಗಾರ ಪ್ರಶಸ್ತಿ' ರೇಸ್​ನಲ್ಲಿ ಕನ್ನಡಿಗ, ಟೀಂ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ‍ಹೆಸರು ನಾಮನಿರ್ದೇಶನಗೊಂಡಿದೆ. ಬಹುತೇಕ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.

ಕನ್ನಡಿಗ ಮಯಾಂಕ್​ ಅಗರವಾಲ್ ಜೊತೆಗೆ ನ್ಯೂಜಿಲ್ಯಾಂಡ್​​ನ ಸ್ಪಿನ್ನರ್​ ಅಜಾಜ್ ಪಟೇಲ್​ ಹಾಗೂ ಆಸ್ಟ್ರೇಲಿಯಾದ ವೇಗದ ಬೌಲರ್​ ಮಿಚೆಲ್​ ಸ್ಟಾರ್ಕ್​​ ಹೆಸರು ನಾಮನಿರ್ದೇಶನಗೊಂಡಿದೆ.

ಕಳೆದ ಕೆಲ ತಿಂಗಳಿಂದ ಟೀಂ ಇಂಡಿಯಾ ಟೆಸ್ಟ್​​ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಮಯಾಂಕ್​ ಅಗರವಾಲ್​, ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜೊತೆಗೆ ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​​ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

ನ್ಯೂಜಿಲ್ಯಾಂಡ್​​ ತಂಡದ ಸ್ಪಿನ್ನರ್​ ಅಜಾಜ್ ಪಟೇಲ್​ ಇನ್ನಿಂಗ್ಸ್​ವೊಂದರಲ್ಲಿ ಟೀಂ ಇಂಡಿಯಾದ 10 ವಿಕೆಟ್​ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದು, ಅವರ ಹೆಸರನ್ನ ಶಿಫಾರಸು ಮಾಡಲಾಗಿದೆ.

ನ್ಯೂಜಿಲ್ಯಾಂಡ್​ ಸ್ಪಿನ್ನರ್​ ಅಜಾಜ್​ ಪಟೇಲ್​

ಇದನ್ನೂ ಓದಿರಿ:ಪಾಕ್​​ ವೇಗಿಗೆ 'CSK shirt' ಉಡುಗೊರೆ ನೀಡಿದ ಧೋನಿ: ಮಾಹಿ ಪ್ರೀತಿಗೆ ಧನ್ಯವಾದ ಹೇಳಿದ ಹ್ಯಾರಿಸ್

ಇಂಗ್ಲೆಂಡ್​-ಆಸ್ಟ್ರೇಲಿಯಾ ನಡುವೆ ಆರಂಭಗೊಂಡಿರುವ ಆಶಸ್​​ ಸರಣಿಯಲ್ಲಿ ಕಾಂಗರೂ ಪಡೆಯ ವೇಗಿ ಮಿಚೆಲ್​ ಸ್ಟಾರ್ಕ್​​​​ ಮಾರಕ ಬೌಲಿಂಗ್​ ಪ್ರದರ್ಶನ ನೀಡಿ, ತಂಡ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಟೀಂ ಇಂಡಿಯಾದ ರೋಹಿತ್​ ಶರ್ಮಾ, ಶುಭ್ಮನ್ ಗಿಲ್ ಹಾಗೂ ಮತ್ತೋರ್ವ ಕನ್ನಡಿಗ ಕೆ ಎಲ್​ ರಾಹುಲ್​​ ಕೆಲ ಪಂದ್ಯಗಳಿಂದ ಹೊರಗುಳಿದಿರುವ ಕಾರಣ ನಾಮನಿರ್ದೇಶನಗೊಳ್ಳುವುದರಿಂದ ಹಿಂದೆ ಬಿದ್ದಿದ್ದಾರೆ.

ಸಿಕ್ಕ ಅವಕಾಶ ಪಡೆದುಕೊಂಡು ಮಿಂಚಿರುವ ಮಯಾಂಕ್​ ಹೆಸರು ಶಿಫಾರಸುಗೊಂಡಿದೆ. ಐಸಿಸಿ ಟೆಸ್ಟ್​ ಶ್ರೇಯಾಂಕದಲ್ಲಿ ಕನ್ನಡಿಗ ಮಯಾಂಕ್​ ಅಗರವಾಲ್​ ಸದ್ಯ 11ನೇ ಸ್ಥಾನದಲ್ಲಿದ್ದಾರೆ.

ABOUT THE AUTHOR

...view details