ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಏಕದಿನ ಸರಣಿಯ 2 ನೇ ಪಂದ್ಯ ಇಂದು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಮಳೆ ಅಡ್ಡಿಪಡಿಸಿದೆ. ಇದಕ್ಕೂ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಫೀಲ್ಡಿಂಗ್ ಆಯ್ದುಕೊಂಡರು. ಈ ಮೂಲಕ 2ನೇ ಪಂದ್ಯದಲ್ಲೂ ಟಾಸ್ ಸೋತು ಭಾರತ ತಂಡ ಬ್ಯಾಟಿಂಗ್‌ಗೆ ಕ್ರೀಸಿಗಿಳಿಯಿತು. ಪಂದ್ಯ ಶುರುವಾಗಿ ನಾಲ್ಕು ಓವರ್‌ಗಳಾಗುತ್ತಲೇ ಮಳೆ ಸುರಿಯಿತು. ಹೀಗಾಗಿ, ಪಂದ್ಯವನ್ನು ಸದ್ಯಕ್ಕೆ ಮೊಟಕುಗೊಳಿಸಲಾಗಿದೆ.
ಈಗಾಗಲೇ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಿವೀಸ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಏಕದಿನ ಸರಣಿ ಗೆಲ್ಲಬೇಕಿದ್ದರೆ ಈ ಪಂದ್ಯ ಶಿಖರ್ ಧವನ್ ಟೀಂಗೆ ಮಹತ್ವದ್ದು.