ಲಂಡನ್: ಲಾರ್ಡ್ಸ್ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ 272 ರನ್ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಭಾರತೀಯ ವೇಗಿಗಳ ದಾಳಿಗೆ ಕಂಗೆಟ್ಟು ಕೇವಲ 75ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದೆ.
ಮೊಹಮ್ಮದ್ ಶಮಿ(56) ಮತ್ತು ಜಸ್ಪ್ರೀತ್ ಬುಮ್ರಾ(34) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ಇಂದು ಭಾರತಕ್ಕೆ ಆಸರೆಯಾಯಿತು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಕೊನೆಯ ದಿನ ಭಾರತ ತಂಡ 8 ವಿಕೆಟ್ ಕಳೆದುಕೊಂಡು 298ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡು, ಇಂಗ್ಲೆಂಡ್ಗೆ 272 ರನ್ಗಳ ಗುರಿ ನೀಡಿತ್ತು.
ಇನ್ನು ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 1 ರನ್ಗೆ ಆರಂಭಿಕರಾದ ರೋರಿ ಬರ್ನ್ಸ್(0) ಮತ್ತು ಡೊಮಿನಿಕ್ ಸಿಬ್ಲಿ(0) ವಿಕೆಟ್ ಕಳೆದುಕೊಂಡಿತು. ಬರ್ನ್ಸ್ ಬುಮ್ರಾಗೆ ವಿಕೆಟ್ ಒಪ್ಪಿಸಿದರೆ, ಸಿಬ್ಲಿ ಶಮಿ ಬೌಲಿಂಗ್ನಲ್ಲಿ ಪಂತ್ಗೆ ಕ್ಯಾಚ್ ನೀಡಿದರು.
ನಂತರ ಜೊತೆ ಹಮೀದ್ ಜೊತೆಗೂಡಿದ ಜೋರೂಟ್ 13 ಓವರ್ಗಳ ಜೊತೆಯಾಟದಲ್ಲಿ 43 ರನ್ ಸೇರಿಸಿ ಚೇತರಿಕೆ ನೀಡಿದರು. ಆದರೆ, ಈ ಹಂತದಲ್ಲಿ ದಾಳಿಗಿಳಿದ ಇಶಾಂತ್ ಶರ್ಮಾ 45 ಎಸೆತಗಳಲ್ಲಿ 9 ರನ್ಗಳಿಸಿದ್ದ ಹಮೀದ್ರನ್ನ ಎಲ್ಬಿ ಬಲೆಗೆ ಬೀಳಿಸಿದರು. 5ನೇ ಕ್ರಮಾಂಕದಲ್ಲಿ ಬಂದ ಬೈರ್ಸ್ಟೋವ್ ಕೂಡ ಕೇವಲ 2 ರನ್ಗಳಿಸಿ ಇಶಾಂತ್ ಶರ್ಮಾಗೆ 2ನೇ ಬಲಿಯಾದರು.
60 ಎಸೆಗಳಲ್ಲಿ 5 ಬೌಂಡರಿ ಸೇರಿದಂತೆ 33 ರನ್ ಗಳಿಸಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್, ಬೈರ್ಸ್ಟೋವ್ ವಿಕೆಟ್ ಒಪ್ಪಿಸಿದ ನಂತರದ ಓವರ್ನಲ್ಲೇ ಬುಮ್ರಾಗೆ ವಿಕೆಟ್ ಒಪ್ಪಿಸಿದರು.
ಪ್ರಸ್ತು 31 ಓವರ್ಗಳ ಆಟ ಬಾಕಿಯುಳಿದಿದ್ದು, ಇಂಗ್ಲೆಂಡ್ಗೆ ಗೆಲ್ಲಲು 197 ರನ್ಗಳ ಅವಶ್ಯಕತೆಯಿದೆ. ಭಾರತಕ್ಕೆ 5 ವಿಕೆಟ್ಗಳ ಬೇಕಾಗಿವೆ. ಮೊಯೀನ್ ಅಲಿ(3) ಮತ್ತು ಬಟ್ಲರ್(4) ಕ್ರೀಸ್ನಲ್ಲಿದ್ದಾರೆ.
ಇದನ್ನು ಓದಿ:ಪದೇ ಪದೇ ಕೆಣಕಿದ ಆಂಗ್ಲರಿಗೆ ಬ್ಯಾಟ್ನಿಂದಲೇ ಉತ್ತರಿಸಿದ ಶಮಿ-ಬುಮ್ರಾ