ಕರ್ನಾಟಕ

karnataka

ETV Bharat / sports

ವಿಶ್ವಕಪ್​ ಗೆಲ್ಲಬೇಕಾದ್ರೆ ಮಧ್ಯಮ ಕ್ರಮಾಂಕಕ್ಕೆ ಸ್ಫೋಟಕ ಬ್ಯಾಟರ್​ಗಳ ಆಯ್ಕೆ ಅಗತ್ಯ : ಅಜಿತ್ ಅಗರ್ಕರ್​ - ಕೆಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕ

ರಾಹುಲ್​ ಸ್ಥಾನದ ಬಗ್ಗೆ ಸ್ಪಷ್ಟತೆ ಬೇಕು. ಏಕೆಂದರೆ, ಪ್ರಸ್ತುತ 4,5 ಮತ್ತು 6ನೇ ಕ್ರಮಾಂಕದಲ್ಲಿ ಅಂತರವಿದೆ. ವಿಶ್ವಕಪ್​ ಗೆಲ್ಲಬೇಕೆಂದರೆ ಆ ಜಾಗಗಳಿಗೆ ಕೆಲವು ಸ್ಫೋಟಕ ಬ್ಯಾಟರ್​ಗಳನ್ನು ಆಯ್ಕೆ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ..

Agarkaron ODI world Cup
ಅಜಿತ್ ಅಗರ್ಕರ್​

By

Published : Feb 5, 2022, 7:00 PM IST

ನವದೆಹಲಿ :2023ರ ಏಕದಿನ ವಿಶ್ವಕಪ್​ಗೂ ಮುನ್ನವೇ ಭಾರತ ತಂಡ ಮಧ್ಯಮ ಕ್ರಮಾಂಕಕ್ಕೆ ಅಗತ್ಯವಿರುವ ಸ್ಫೋಟಕ ಬ್ಯಾಟರ್​ಗಳನ್ನು ಸೇರಿಸುವ ಅಗತ್ಯವಿದೆ ಎಂದು ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್​ ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಬ್ಯಾಟಿಂಗ್ ಕ್ರಮಾಂಕಗಳನ್ನು ಖಚಿತಗೊಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ದಶಕದ ಬಳಿಕ ಏಕದಿನ ವಿಶ್ವಕಪ್ ಭಾರತಕ್ಕೆ ಮರಳುತ್ತಿದೆ. ಭಾನುವಾರ ವಿಂಡೀಸ್​ ವಿರುದ್ಧ ವಿಶ್ವಕಪ್​ ತಯಾರಿಯಾಗಿ ಮೊದಲ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಅಧಿಕೃತವಾಗಿ ನಾಯಕನಾಗಿ ಮುನ್ನಡೆಸಲಿದ್ದಾರೆ.

"ಯಾವ ಕ್ರಮಾಂಕಗಳಿಗೆ ಯಾವ ಆಟಗಾರರು ಸೂಕ್ತ ಎನ್ನುವುದನ್ನು ಈಗಲೇ ಅಂತಿಮಗೊಳಿಸಬೇಕು. ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೋ ಅಥವಾ ಅವರು ಎಲ್ಲಿ ಆಡಬೇಕು ಎಂಬುವುದನ್ನೂ ಸಮೀಪಿಸುತ್ತಿರುವ ವಿಶ್ವಕಪ್​ಗೂ ಮುನ್ನ ಖಚಿತಗೊಳಿಸಬೇಕು. ಒಂದು ವೇಳೆ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾರೆಂದರೆ ಅದಕ್ಕೆ ಅವರು ಅಂಟಿಕೊಳ್ಳಬೇಕು" ಎಂದು ಸ್ಟಾರ್​ ಸ್ಪೋರ್ಟ್ಸ್​ ಕಾರ್ಯಕ್ರಮದಲ್ಲಿ ಅಗರ್ಕರ್​ ಹೇಳಿದ್ದಾರೆ.

ರಾಹುಲ್​ ಸ್ಥಾನದ ಬಗ್ಗೆ ಸ್ಪಷ್ಟತೆ ಬೇಕು. ಏಕೆಂದರೆ, ಪ್ರಸ್ತುತ 4,5 ಮತ್ತು 6ನೇ ಕ್ರಮಾಂಕದಲ್ಲಿ ಅಂತರವಿದೆ. ವಿಶ್ವಕಪ್​ ಗೆಲ್ಲಬೇಕೆಂದರೆ ಆ ಜಾಗಗಳಿಗೆ ಕೆಲವು ಸ್ಫೋಟಕ ಬ್ಯಾಟರ್​ಗಳನ್ನು ಆಯ್ಕೆ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ರೋಹಿತ್ ಶರ್ಮಾ ಅವರು ನಾಯಕನಾದ ಬಳಿಕ ಇದು ಅವರ ಮೊದಲ ಏಕದಿನ ಸರಣಿಯಾಗಿದೆ. ಅವರು ಈಗಾಗಲೇ ಇಶಾನ್ ಕಿಶನ್​ ತಮ್ಮ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ. ಆದರೆ, 2ನೇ ಪಂದ್ಯಕ್ಕೆ ರಾಹುಲ್ ಆಗಮಿಸಲಿದ್ದಾರೆ.

ಆ ವೇಳೆ ಇಶಾನ್​ರನ್ನೇ ಮುಂದುವರಿಸಲಿದ್ದಾರಾ ಅಥವಾ ರಾಹುಲ್​ರನ್ನು ಮತ್ತೆ ಆರಂಭಿಕ ಸ್ಥಾನದಲ್ಲಿ ಆಡಿಸಲಿದ್ದಾರೆಯೇ ಎನ್ನುವುದು ಕುತೂಹಲ ಮೂಡಿಸಿದೆ. 13ನೇ ಆವೃತ್ತಿಯ ಏಕದಿನ ವಿಶ್ವಕಪ್​ 2023 ಅಕ್ಟೋಬರ್​-ನವೆಂಬರ್​ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿದೆ.

ಇದನ್ನೂ ಓದಿ:ವಿಂಡೀಸ್​ ಏಕದಿನ ಸರಣಿ : ಸಚಿನ್ ಹೆಸರಿನಲ್ಲಿರುವ​ ವಿಶ್ವದಾಖಲೆ ಮುರಿಯಲಿರುವ ಕೊಹ್ಲಿ

ABOUT THE AUTHOR

...view details