ರಾಯ್‌ಪುರ (ಛತ್ತೀಸ್‌ಗಢ):ನಮನ್ ಓಜಾ ಸಿಡಿಸಿದ ಭರ್ಜರಿ ಅಜೇಯ ಶತಕ, ವಿನಯ್ ಕುಮಾರ್ ಆಲ್ರೌಂಡ್ ಆಟ ಮತ್ತು ಅಭಿಮನ್ಯು ಮಿಥುನ್ ಮಾರಕ ಬೌಲಿಂಗ್ ನೆರವಿನಿಂದ ಶ್ರೀಲಂಕಾ ಲೆಜೆಂಡ್ಸ್ ಸೋಲಿಸಿ 2 ನೇ ಬಾರಿಗೆ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.
ಶನಿವಾರ ರಾಯ್‌ಪುರದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಲೆಜೆಂಡ್ಸ್ 20 ಓವರ್‌ಗಳಲ್ಲಿ 6 ವಿಕೆಟ್ಗೆ 195 ರನ್ ಗಳಿಸಿತು. ಶ್ರೀಲಂಕಾ ಲೆಜೆಂಡ್ಸ್ 18.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 162 ರನ್ ಮಾತ್ರ ಗಳಿಸಿ, 33 ರನ್ಗಳಿಂದ ಸೋಲು ಕಂಡಿತು.
ನಮನ್ ಓಜಾ ಶೋ:ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಜೊತೆ ಇನಿಂಗ್ಸ್ ಆರಂಭಿಸಿದ ನಮನ್ ಓಜಾ ಶ್ರೀಲಂಕಾ ಲೆಜೆಂಡ್ಸ್ ಬೌಲರ್ಗಳನ್ನು ಚೆಂಡಾಡಿದರು. 71 ಎಸೆತಗಳಲ್ಲಿ ಅಮೋಘ 108* ರನ್ ಗಳಿಸಿದರು. ಸಚಿನ್ ಸೊನ್ನೆಗೆ ಔಟಾದರು. ವಿನಯ್ಕುಮಾರ್ 36, ಯುವರಾಜ್ ಸಿಂಗ್ 19 ರನ್ ಬಾರಿಸಿದರು. ಶ್ರೀಲಂಕಾ ಲೆಜೆಂಡ್ಸ್ ಪರವಾಗಿ ನುವಾನ್ ಕುಲಶೇಖರ 3, ಇಸುರು ಉದಾನಾ 2 ವಿಕೆಟ್ ಪಡೆದರು.