ಕರ್ನಾಟಕ

karnataka

ETV Bharat / sports

IND vs NZ 2nd T20I: ರಾಂಚಿಯಲ್ಲಿ ಕಿವೀಸ್ ಮಣಿಸಿ ಸರಣಿ ಗೆಲ್ಲುವ ವಿಶ್ವಾಸದಲ್ಲಿ ರೋಹಿತ್ ಪಡೆ

ರೋಹಿತ್ ಶರ್ಮಾ ಅಧಿಕೃತವಾಗಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ನಂತರ ಭಾರತ ತಂಡ ಮೊದಲ ಸರಣಿಯನ್ನಾಡುತ್ತಿದ್ದು ನಾಳಿನ ಪಂದ್ಯ ಗೆದ್ದರೆ, ನಾಯಕನಾಗಿ ರೋಹಿತ್​ಗೆ ಮತ್ತು ಕೋಚ್​ ಆಗಿ ರಾಹುಲ್​ ದ್ರಾವಿಡ್​ಗೆ (Team India Coach) ಇದೊಂದು ಸ್ಮರಣೀಯ ಸರಣಿಯಾಗಲಿದೆ.

India gear up for series win and better middle-order show
ಭಾರತ ಮತ್ತು ನ್ಯೂಜಿಲ್ಯಾಂಡ್ ಟಿ20

By

Published : Nov 18, 2021, 8:24 PM IST

ರಾಂಚಿ(ಜಾರ್ಖಂಡ್): ಶುಕ್ರವಾರ (ನಾಳೆ) ರಾಂಚಿಯಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ (​New Zealand) ವಿರುದ್ಧ 2ನೇ ಟಿ20 (2nd T20I) ಪಂದ್ಯ ಆಡಲಿದೆ. ಮೊದಲ ಪಂದ್ಯವನ್ನು ಗೆದ್ದಿರುವ ಭಾರತ (Team India) ಇನ್ನೊಂದು ಪಂದ್ಯ ಉಳಿದಿರುವಂತೆಯೇ ಸರಣಿ ಜಯಿಸುವ ವಿಶ್ವಾಸದಲ್ಲಿದೆ.

ರೋಹಿತ್ ಅಧಿಕೃತವಾಗಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ನಂತರ ಭಾರತೀಯ ತಂಡ ಮೊದಲ ಸರಣಿಯನ್ನಾಡುತ್ತಿದೆ. ಒಂದು ವೇಳೆ, ನಾಳಿನ ಪಂದ್ಯವನ್ನೂ ಗೆದ್ದರೆ, ನಾಯಕನಾಗಿ ರೋಹಿತ್​ಗೆ ಮತ್ತು ಕೋಚ್​ ಆಗಿ ರಾಹುಲ್​ ದ್ರಾವಿಡ್​ಗೆ ಇದೊಂದು ಸ್ಮರಣೀಯ ಸರಣಿಯೇ ಸರಿ.

SKY ಆಟದ ಸೊಗಸು ಪಂತ್, ಅಯ್ಯರ್‌ ವೈಫಲ್ಯ ಮರೆಸಿತು:

ಕೊಹ್ಲಿ ಗೈರಿನಲ್ಲಿ 3ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್​ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇವರು, ಕಳೆದ ಪಂದ್ಯದಲ್ಲಿ 42 ಎಸೆತಗಳಲ್ಲಿ 62 ರನ್​ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರ ಆಟದ ನೆರವಿನಿಂದ ಶ್ರೇಯಸ್​ ಅಯ್ಯರ್ ಮತ್ತು ಪಂತ್ ವೈಫಲ್ಯವು ತಂಡಕ್ಕೆ ಹೆಚ್ಚು ಹೊರೆಯಾಗಲಿಲ್ಲ. ಆದರೆ, ಈ ಯುವ ಆಟಗಾರರು 2ನೇ ಪಂದ್ಯದಲ್ಲಿ ಸಿಗುವ ಮತ್ತೊಂದು ಅವಕಾಶವನ್ನು ಕೈಚೆಲ್ಲದೆ ತಮ್ಮ ಆಯ್ಕೆ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ.

ಡೆತ್‌ ಬೌಲಿಂಗ್‌ನಲ್ಲಿ ಹಿನ್ನಡೆ:

ಅನುಭವಿಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್​ ಉತ್ತಮ ಪ್ರದರ್ಶನ ತೋರಿರುವುದು ತಂಡದಲ್ಲಿ ಸಕಾರಾತ್ಮಕ ಭಾವನೆ ಉಂಟುಮಾಡಿದೆ. ಐಪಿಎಲ್​ನಲ್ಲಿ ವಿಫಲರಾಗಿದ್ದ 31 ವರ್ಷದ ಸ್ವಿಂಗ್ ಮಾಸ್ಟರ್ ಭುವಿ, ಮೊದಲ ಪಂದ್ಯದಲ್ಲಿ​ 4 ಓವರ್‌ಗಳಲ್ಲಿ ಕೇವಲ 24 ರನ್​ ನೀಡಿ 2 ವಿಕೆಟ್ ಪಡೆದರೆ, ಅಶ್ವಿನ್​ 23ಕ್ಕೆ 2 ವಿಕೆಟ್ ಸಾಧನೆ ಮಾಡಿದ್ದರು. ಆದರೆ ಭಾರತೀಯ ಡೆತ್ ಬೌಲಿಂಗ್ (Indian death bowling) ಮಾತ್ರ ಹಿನ್ನಡೆ ಅನುಭವಿಸಿದೆ. ನಾಳಿನ ಪಂದ್ಯದಲ್ಲಿ ಅದರೆಡೆಗೆ ಕೋಚ್ ಮತ್ತು ನಾಯಕ ಹೆಚ್ಚಿನ ಗಮನ ನೀಡಬೇಕಿದೆ. ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ನಾಳೆ ನೀಶಮ್, ಸೋಧಿಗೆ ಅವಕಾಶ?

ಇತ್ತ ಸ್ಟಾರ್​ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ನ್ಯೂಜಿಲ್ಯಾಂಡ್​ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಕಾಣುತ್ತಿದೆ. ಕಳೆದ 6 ತಿಂಗಳಿನಿಂದ ತಂಡದಲ್ಲಿ ಸೈಡ್​ಲೈನ್​ ಆಗಿದ್ದ ಚಾಪ್ಮನ್​ 63 ರನ್​ಗಳಿಸಿದ್ದರೆ, ವಿಶ್ವಕಪ್ ಫೈನಲ್​ನಲ್ಲಿ ವೈಫಲ್ಯ ಅನುಭವಿಸಿದ್ದ ಮಾರ್ಟಿನ್ ಗಪ್ಟಿಲ್​ ಉತ್ತಮ ಫಾರ್ಮ್​ನಲ್ಲಿದ್ದಾರೆ. ನಾಳಿನ ಪಂದ್ಯದಲ್ಲಿ ಆಲ್​ರೌಂಡರ್ ನೀಶಮ್​ ಮತ್ತು ಸ್ಪಿನ್ನರ್​ ಸೋಧಿ ಕಣಕ್ಕಿಳಿಯುವ ಸಂಭವವಿದೆ.

ಮುಖಾಮುಖಿ:

ಎರಡು ದೇಶಗಳು 18 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ತಲಾ 9 ಪಂದ್ಯಗಳಲ್ಲಿ ಗೆಲುವಿನ ದಾಖಲೆಯನ್ನು ಹೊಂದಿವೆ.

ತಂಡಗಳು ಇಂತಿವೆ:

ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್.ರಾಹುಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಆರ್.ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್ ಹಾಗು ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್: ಟಿಮ್ ಸೌಥಿ (ನಾಯಕ), ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಲಾಕಿ ಫರ್ಗ್ಯು ಸನ್, ಮಾರ್ಟಿನ್ ಗಪ್ಟಿಲ್, ಆಡಮ್ ಮಿಲ್ನೆ, ಡೆರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್ ಮತ್ತು ಇಶ್ ಸೋಧಿ.

ಇದನ್ನೂ ಓದಿ: ಎರಡು ದೇಶಗಳ ಪರ ಆಡಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ ಕಿವೀಸ್ ಬ್ಯಾಟರ್​

ABOUT THE AUTHOR

...view details