ಕರ್ನಾಟಕ

karnataka

ETV Bharat / sports

ರೋಹಿತ್​ ಶರ್ಮಾ ಎಡಗೈಗೆ ಗಾಯ: ಇಂಜುರಿ ಭಯದಲ್ಲಿ ಅಭ್ಯಾಸದಿಂದ ದೂರ ಉಳಿದ ಆಟಗಾರರು - ETV Bharath Kannada news

ನಾಳೆಯಿಂದ ಓವೆಲ್​ ಮೈದಾನದಲ್ಲಿ ಟೆಸ್ಟ್​ ಚಾಂಪಿಯನ್​ಶಿಪ್​ ನಡೆಯಲಿದೆ. ಇಂದು ಭಾರತದ ಹೆಚ್ಚಿನ ಆಟಗಾರರು ಗಾಯದ ಸಮಸ್ಯೆ ಬಾಧಿಸಬಾರದು ಎಂದು ಅಭ್ಯಾಸದಿಂದ ದೂರ ಉಳಿದಿದ್ದಾರೆ.

India faces skipper Rohit Sharma  injury scare ahead of WTC 2023 final
ರೋಹಿತ್​ ಶರ್ಮಾ ಎಡಗೈಗೆ ಗಾಯ

By

Published : Jun 6, 2023, 6:01 PM IST

ಲಂಡನ್ : ಇಂಗ್ಲೆಂಡ್​ನ ಪಿಚ್​ನಲ್ಲಿ ಹೆಚ್ಚು ಬೌನ್ಸ್​ಗಳು ಆಗುವುದರಿಂದ ಗಾಯಗಾಳಾಗುವ ಭಯ ತಂಡವನ್ನು ಕಾಡುತ್ತಿದೆ. ನಾಳೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ ಪಂದ್ಯ ಆರಂಭವಾಗಲಿದ್ದು, ಇದಕ್ಕೂ ಮುನ್ನ ನಾಯಕ ರೋಹಿತ್​ ಶರ್ಮಾ ಅವರ ಎಡಗೈ ಹೆಬ್ಬೆರಳಿಗೆ ಅಭ್ಯಾಸದ ವೇಳೆ ಗಾಯವಾಗಿದೆ.

ಇಂದು ಅಭ್ಯಾಸದ ಕಣದಲ್ಲಿ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಕಾಣಿಸಿಕೊಂಡಿಲ್ಲ. ರೋಹಿತ್ ಶರ್ಮಾ, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್ ಮತ್ತು ಉಮೇಶ್ ಯಾದವ್ ಮಾತ್ರ ಅಭ್ಯಾಸಕ್ಕೆ ಬಂದಿದ್ದರು.

ಡಬ್ಲ್ಯೂಟಿಸಿ 2023 ಫೈನಲ್‌ನ ಮುನ್ನಾ ದಿನದಂದು ನೆಟ್ಸ್ ಬ್ಯಾಟಿಂಗ್ ಅಭ್ಯಾಸದ ಸಮಯದಲ್ಲಿ, ರೋಹಿತ್ ಅವರ ಎಡಗೈ ಹೆಬ್ಬೆರಳಿಗೆ ಪೆಟ್ಟಾಯಿತು. ಅವರು ಬ್ಯಾಂಡೇಜ್ ಮಾಡಿಕೊಂಡು ಅಭ್ಯಾಸ ಮುಂದುವರೆಸಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ 2023 ಫೈನಲ್ ಜೂನ್ 7 ರಿಂದ ಜೂನ್ 11ರ ವರೆಗೆ ಲಂಡನ್‌ನ ಓವಲ್‌ನಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುತ್ತದೆ. 12ನೇ ತಾರೀಕನ್ನು ಮೀಸಲು ದಿನವಾಗಿ ಇಡಲಾಗಿದೆ. ಇಂಗ್ಲೆಂಡ್​ನಲ್ಲಿ ಈಗ ಮಳೆಗಾಲ ಅಲ್ಲದಿದ್ದರೂ, ಬೇಸಿಗೆಯ ಮಳೆಯಾಗುವ ಸಾಧ್ಯತೆ ಇರುತ್ತದೆ.

ಭಾರತ ತಂಡದ ಆಟಗಾರರು ಫಾರ್ಮ್​ನಲ್ಲಿರುವುದು ತಂಡದ ಗೆಲುವಿಗೆ ಹೆಚ್ಚಿನ ಭರವಸೆಯನ್ನು ಕೊಟ್ಟಿದೆ. ವಿರಾಟ್​ ಕೊಹ್ಲಿ ಕಳೆದ ವರ್ಷ ಟಿ20 ಏಷ್ಯಾಕಪ್​ನ ನಂತರ ಲಯಕ್ಕೆ ಮರಳಿದ್ದಾರೆ. ಆರಂಭಿಕ ಶುಭಮನ್ ​ಗಿಲ್ ಗೋಲ್ಡನ್​ ಫಾರ್ಮ್​ನಲ್ಲಿದ್ದಾರೆ. ವರ್ಷಾರಂಭದಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಲ್ಲದೇ, ಐಪಿಎಲ್​ನಲ್ಲೂ ಈ ಆವೃತ್ತಿಯ ಅತಿ ಹೆಚ್ಚು ರನ್​ ಗಳಿಸಿ ಪಿಂಕ್​ ಕ್ಯಾಪ್​ ಪಡೆದಿದ್ದಾರೆ.

ಚೇತೇಶ್ವರ ಪೂಜಾರ ಇಂಗ್ಲೆಂಡ್​ನಲ್ಲಿ ಕೌಂಟಿ ಕ್ರಿಕೆಟ್ ಆಡಿದ್ದು, ಅವರು ಹವಾಮಾನಕ್ಕೆ ಹೊಂದಿಕೊಂಡಿದ್ದಾರೆ. ದೇಶೀಯ ಟೂರ್ನಿ ಮತ್ತು ಐಪಿಎಲ್​ನಲ್ಲಿ ಅಜಿಕ್ಯ ರಹಾನೆ ಉತ್ತಮ ರನ್​ ರೇಟ್​ ಗಳಿಸಿ ಆಡಿದ್ದು, 18 ತಿಂಗಳ ನಂತರ ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಟೆಸ್ಟ್​ ಚಾಂಪಿಯನ್​ಶಿಪ್​ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಇಶಾನ್ ಕಿಶನ್ (ವಿಕೆಟ್​ ಕೀಪರ್​).

ಸ್ಟ್ಯಾಂಡ್-ಬೈ ಆಟಗಾರರು:ಸೂರ್ಯಕುಮಾರ್ ಯಾದವ್, ಮುಖೇಶ್ ಕುಮಾರ್ ಮತ್ತು ಯಶಸ್ವಿ ಜೈಸ್ವಾಲ್

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್​ ಕೀಪರ್​), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್​), ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್

ಸ್ಟ್ಯಾಂಡ್ಬೈ ಆಟಗಾರರು: ಮಿಚ್ ಮಾರ್ಷ್, ಮ್ಯಾಥ್ಯೂ ರೆನ್​ಶಾ.

ಇದನ್ನೂ ಓದಿ:ಓವೆಲ್​ ಪಿಚ್​ ಅಂದಾಜಿಸಲು ಸಾಧ್ಯವಿಲ್ಲ, ಸವಾಲಿಗೆ ನಾವು ಸಿದ್ಧ: ವಿರಾಟ್ ಕೊಹ್ಲಿ​​

ABOUT THE AUTHOR

...view details