ಸೆಂಚುರಿಯನ್: ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಳೆದುಕೊಂಡು 79 ರನ್ಗಳಿಸಿದ್ದು, 209ರನ್ಗಳ ಮುನ್ನಡೆ ಸಾಧಿಸಿದೆ.
ಮೂರನೇ ದಿನ 16 ರನ್ಗಳಿಸಿ ಒಂದು ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಬುಧವಾರ ನೈಟ್ ವಾಚಮನ್ಗಳಾದ ಶಾರ್ದೂಲ್ ಠಾಕೂರ್ (10) ಮತ್ತು ಕೆಎಲ್ ರಾಹುಲ್(23) ವಿಕೆಟ್ಗಳನ್ನು ಬಹುಬೇಗ ಕಳೆದುಕೊಂಡಿತು.
ಆದರೆ, 4ನೇ ವಿಕೆಟ್ ನಾಯಕ ವಿರಾಟ್ ಕೊಹ್ಲಿ (18) ಮತ್ತು ಅನುಭವಿ ಚೇತೇಶ್ವರ್ ಪೂಜಾರ(12) 25 ರನ್ಗಳ ಜೊತೆಯಾಟ ನೀಡಿ ಉತ್ತಮ ಲಯದಲ್ಲಿರುವಂತೆ ಗೋಚರಿಸುತ್ತಿದ್ದಾರೆ. ನಾಲ್ಕನೇ ದಿನದಲ್ಲಿ ಇನ್ನೂ 72 ಓವರ್ಗಳ ಆಟ ಬಾಕಿ ಉಳಿದಿದ್ದು, ಭಾರತ ಕೊನೆಯ ಸೆಷನ್ವರೆಗೆ ಬ್ಯಾಟಿಂಗ್ ಮಾಡಿ ಪ್ರಸ್ತುತ ಮೊತ್ತಕ್ಕೆ 100 ರನ್ಗಳನ್ನು ಸೇರಿಸಿ ಡಿಕ್ಲೇರ್ ಘೋಷಿಸಬಹದು ಅಥವಾ ದಿನಪೂರ್ತಿ ಬ್ಯಾಟಿಂಗ್ ಮಾಡಿ ಕೊನೆಯ ದಿನವನ್ನು ಅತಿಥೇಯರಿಗೆ ನೀಡುವ ಸಾಧ್ಯತೆ ಕೂಡ ಇದೆ.
ಮೊದಲ ದಿನ 272 ರನ್ಗಳಿಸಿದ್ದ ಟೀಮ್ ಇಂಡಿಯಾ 3ನೇ ದಿನ 327 ರನ್ಗಳಿಸಿ ಆಲೌಟ್ ಆದರೆ, ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 197 ರನ್ಗಳಿಗೆ ಸರ್ವಪತನ ಕಂಡಿತು. ಕೊಹ್ಲಿ ಪಡೆ 130 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತ್ತು.
ಇದನ್ನೂ ಓದಿ:ಅತಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದು ದಾಖಲೆ ಬರೆದ ಮೊಹಮ್ಮದ್ ಶಮಿ