ನವದೆಹಲಿ :ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಭಾರತ ಏಳು ವಿಕೆಟ್‌ಗಳಿಂದ ಸೋಲನುಭವಿಸಿದೆ. ಇದರಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಪಡೆ ಐದನೇ ಸ್ಥಾನಕ್ಕೆ ಕುಸಿದಿದೆ.
WTCಯ ಉದ್ಘಾಟನಾ ಆವೃತ್ತಿಯ ರನ್ನರ್ ಅಪ್ ಆಗಿದ್ದ ಭಾರತ ತಂಡವು ಪ್ರಸ್ತುತ ಎರಡನೇ ಆವೃತ್ತಿಯಲ್ಲಿ 49.07 ಶೇಕಡಾವಾರು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ (PCT).
ಭಾರತವು ಡಬ್ಲ್ಯುಟಿಸಿಯ ಎರಡನೇ ಆವೃತ್ತಿಯಲ್ಲಿ ಒಂಬತ್ತು ಟೆಸ್ಟ್‌ಗಳನ್ನು ಆಡಿದ್ದು, ನಾಲ್ಕು ಗೆದ್ದಿದೆ, ಮೂರರಲ್ಲಿ ಸೋತಿದೆ ಮತ್ತು ಎರಡು ಡ್ರಾ ಮಾಡಿಕೊಂಡಿದೆ. ಎರಡನೇ ಟೆಸ್ಟ್‌ನ ನಂತರ ಭಾರತವು 55.21 PCT ಯೊಂದಿಗೆ ನಾಲ್ಕನೇ ಸ್ಥಾನದಲ್ಲಿತ್ತು ಮತ್ತು ದಕ್ಷಿಣ ಆಫ್ರಿಕಾ 50 PCTಯೊಂದಿಗೆ ನಂತರದ ಸ್ಥಾನದಲ್ಲಿತ್ತು.
ಆದರೆ, ನ್ಯೂಲ್ಯಾಂಡ್ಸ್ ಟೆಸ್ಟ್‌ನಲ್ಲಿನ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ (66.66 PCT) ನಾಲ್ಕನೇ ಸ್ಥಾನಕ್ಕೆ ಏರಿತು. ಪ್ರಸ್ತುತ, ಶ್ರೀಲಂಕಾ 100 PCT ಯೊಂದಿಗೆ ಅಗ್ರಸ್ಥಾನದಲ್ಲಿದ್ರೆ, ಆಸ್ಟ್ರೇಲಿಯಾ (83.33) ಮತ್ತು ಪಾಕಿಸ್ತಾನ (75) ಎರಡು ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿವೆ.
ಈ ವಾರದ ಆರಂಭದಲ್ಲಿ ಬಾಂಗ್ಲಾದೇಶದೊಂದಿಗೆ ಎರಡು ಪಂದ್ಯಗಳ ಸರಣಿಯನ್ನು ಸ್ವದೇಶದಲ್ಲಿ ಡ್ರಾ ಮಾಡಿಕೊಂಡ ಹಾಲಿ ಚಾಂಪಿಯನ್ ನ್ಯೂಜಿಲೆಂಡ್, 33.33 PCT ಯೊಂದಿಗೆ ಆರನೇ ಸ್ಥಾನದಲ್ಲಿದೆ.