ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ನಲ್ಲಿ ಭಾರತ ಮಹಿಳಾ ಕ್ರಿಕೆಟರ್​ ತಾನಿಯಾ ಭಾಟಿಯಾರ ಬ್ಯಾಗ್​ ಕಳವು: ದೂರು - ಹೋಟೆಲ್​ ಕೊಠಡಿಯಿಂದ ಬ್ಯಾಗ್​ ಕದ್ದಿರುವ ಘಟನೆ

ಭಾರತೀಯ ಕ್ರಿಕೆಟ್​ ಆಟಗಾರ್ತಿ ತಾನಿಯಾ ಭಾಟಿಯಾರ ವೈಯಕ್ತಿ ಬ್ಯಾಗ್​ ಅನ್ನು ಇಂಗ್ಲೆಂಡ್​ನಲ್ಲಿ ಅವರು ಉಳಿದಿದ್ದ ಹೋಟೆಲ್​ನಿಂದ ಕದಿಯಲಾಗಿದೆ. ಈ ಬಗ್ಗೆ ಆಟಗಾರ್ತಿ ಹೋಟೆಲ್​ ಮ್ಯಾನೇಜ್​ಮೆಂಟ್​ಗೆ ದೂರು ನೀಡಿದ್ದಾರೆ.

india-cricketer-taniya-bhatia
ಇಂಗ್ಲೆಂಡ್​ನಲ್ಲಿ ಭಾರತ ಮಹಿಳಾ ಕ್ರಿಕೆಟರ್​ ತಾನಿಯಾ ಭಾಟಿಯಾರ ಬ್ಯಾಗ್​ ಕಳವು

By

Published : Sep 26, 2022, 10:59 PM IST

ಭಾರತ ವನಿತೆಯೆ ಕ್ರಿಕೆಟ್​​ ತಂಡ ಇಂಗ್ಲೆಂಡ್​ ವನಿತೆಯರನ್ನು ಅವರದ್ದೇ ನೆಲದಲ್ಲಿ ಸೋಲಿಸಿ ಏಕದಿನ ಸರಣಿಯನ್ನು 3-0 ಯಿಂದ ವೈಟ್​ವಾಷ್​ ಮಾಡಿ ಐತಿಹಾಸಿಕ ದಾಖಲೆ ಮಾಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ಕೊನೆಯಲ್ಲಿ ಭಾರತದ ದೀಪ್ತಿ ಶರ್ಮಾ ಅವರು ಇಂಗ್ಲೆಂಡ್​ ಆಟಗಾರ್ತಿಯನ್ನು ಮಂಕಡಿಂಗ್​ ಮೂಲಕ ಔಟ್​ ಮಾಡಿರುವುದು ಭಾರೀ ಚರ್ಚೆ ನಡೆದಿರುವ ಮಧ್ಯೆಯೇ ತಾನಿಯಾ ಭಾಟಿಯಾ ಅವರ ಹೋಟೆಲ್​ ಕೊಠಡಿಯಿಂದ ಬ್ಯಾಗ್​ ಕದ್ದಿರುವ ಘಟನೆ ನಡೆದಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ತಾನಿಯಾ ಭಾಟಿಯಾ, "ನಾನು ಉಳಿದುಕೊಂಡಿದ್ದ ಲಂಡನ್​ನ ಮ್ಯಾರಿಯಟ್ ಹೋಟೆಲ್​ನ ಕೊಠಡಿಗೆ ಯಾರೋ ನುಗ್ಗಿ ನಗದು ಹಣ, ಕಾರ್ಡ್‌ಗಳು, ಕೈಗಡಿಯಾರಗಳು ಮತ್ತು ಆಭರಣಗಳಿರುವ ನನ್ನ ಬ್ಯಾಗ್ ಅನ್ನು ಕದ್ದಿದ್ದಾರೆ. ಎಂಥಾ ಅಸುರಕ್ಷಿತ ಸ್ಥಳ ಎಂದು ಹೋಟೆಲ್​ ಅನ್ನು ಟ್ಯಾಗ್​ ಮಾಡಿದ್ದಾರೆ.

ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ನಿಗದಿ ಮಾಡಿದ ಹೋಟೆಲ್​ನಲ್ಲಿ ಉಳಿದುಕೊಂಡರೂ ಈ ರೀತಿ ನಡೆದಿದೆ. ಇದೊಂದು ಆಶ್ಚರ್ಯಕರ ಸಂಗತಿ. ಅಚ್ಚರಿಯೂ ಆಗಿದೆ. ಹೋಟೆಲ್​ ಮ್ಯಾನೇಜ್​ಮೆಂಟ್​ ಶೀಘ್ರವೇ ಸಮಸ್ಯೆಯನ್ನು ಪರಿಹಡಿಸಬೇಕು ಎಂದು ತಾನಿಯಾ ಒತ್ತಾಯಿಸಿದ್ದಾರೆ.

ತಾನಿಯಾರ ಈ ಟ್ವೀಟ್​ಗೆ ಹೋಟೆಲ್ ಮ್ಯಾನೇಜ್​ಮೆಂಟ್​ ಪ್ರತಿಕ್ರಿಯಿಸಿದ್ದು, ಕೆಲ ವಿವರಗಳನ್ನು ಕೇಳಿದೆ. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. ಹೆಸರು, ವಿಳಾಸ, ಇಮೇಲ್​, ಹೋಟೆಲ್​ ರೂಮ್​ ನಿಗದಿ ಮಾಡಿದ ದಿನಾಂಕ ಸೇರಿ ಮತ್ತಿತರ ವಿವರಗಳನ್ನು ನೀಡಲು ಕೋರಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಟ್ವೀಟ್​ನಲ್ಲಿ ತಿಳಿಸಿದೆ.

ಓದಿ:ಹರ್ಷಲ್​, ಭುವನೇಶ್ವರ್​ ಕಳಪೆ ಆಟಕ್ಕೆ ಟೀಕೆ.. ಬೆಂಬಲಕ್ಕೆ ನಿಂತ ನಾಯಕ ರೋಹಿತ್​ ಶರ್ಮಾ

ABOUT THE AUTHOR

...view details