ಕರ್ನಾಟಕ

karnataka

2024ರ ಕ್ರಿಕೆಟ್ ವೇಳಾಪಟ್ಟಿ: ಈ ವರ್ಷವಾದರೂ ಟ್ರೋಫಿ ಗೆಲ್ಲುತ್ತಾ ಭಾರತ?

By ETV Bharat Karnataka Team

Published : Jan 1, 2024, 1:57 PM IST

India Team cricket schedule: 2024ರಲ್ಲಿ ಭಾರತ ಪುರುಷರ ಕ್ರಿಕೆಟ್​​ ತಂಡ 12 ಟೆಸ್ಟ್‌, ಮೂರು ಏಕದಿನ ಮತ್ತು ಒಂಬತ್ತು ಟಿ20 ಪಂದ್ಯಗಳನ್ನು ಆಡಲಿದೆ.

India cricket schedule
India cricket schedule

ಹೈದರಾಬಾದ್: ವೆಸ್ಟ್​ ಇಂಡೀಸ್​ ಮತ್ತು ಯುಎಸ್​ಎನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಹೊರತುಪಡಿಸಿ ಭಾರತ ಪುರುಷರ ತಂಡ ಈ ವರ್ಷ ಕನಿಷ್ಠ 12 ಟೆಸ್ಟ್‌, ಮೂರು ಏಕದಿನ ಮತ್ತು ಒಂಬತ್ತು ಟಿ20 ಪಂದ್ಯಗಳನ್ನು ಆಡಲಿದೆ. 2023ರಲ್ಲಿ ಏಕದಿನ ವಿಶ್ವಕಪ್​​ನಲ್ಲಿ ರನ್ನರ್​ ಅಪ್​ ಆಗಿರುವ ಭಾರತ, ಟಿ20 ವಿಶ್ವಕಪ್​ ಗೆಲ್ಲುವ ತವಕದಲ್ಲಿದೆ. ಮುಂದಿನ ಕ್ಯಾಲೆಂಡರ್ ವರ್ಷದ ಭಾರತ ಪುರುಷರ ಕ್ರಿಕೆಟ್ ವೇಳಾಪಟ್ಟಿ ಹೀಗಿದೆ.

  • ದಕ್ಷಿಣ ಆಫ್ರಿಕಾ ಪ್ರವಾಸ: ಜನವರಿ 2024: ಭಾರತವು ಡಿಸೆಂಬರ್ 2023ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿತ್ತು. ಮೂರು ಟಿ20, ಏಕದಿನ ಮತ್ತು ಎರಡು ಟೆಸ್ಟ್​ ಪಂದ್ಯಗಳು ಈ ಸರಣಿಯಲ್ಲಿವೆ. ಏಕದಿನ, ಟಿ20, 1ನೇ ಟೆಸ್ಟ್​ ಡಿಸೆಂಬರ್​ನಲ್ಲೇ ಮುಕ್ತಾಯಗೊಂಡಿದ್ದು ಕೊನೆಯ ಟೆಸ್ಟ್​​ ಜನವರಿ 3ರಿಂದ 7ರವರೆಗೆ ನಡೆಯಲಿದೆ.
  • ಅಫ್ಘನ್ ವಿರುದ್ಧ ಟಿ20:ಜನವರಿ 11ರಿಂದ ಟಿ20 ವಿಶ್ವಕಪ್​ ತಯಾರಿ ಹಿನ್ನೆಲೆಯಲ್ಲಿ 3 ಪಂದ್ಯಗಳು ನಡೆಯಲಿವೆ. ಅಫ್ಘಾನಿಸ್ತಾನ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. 11 ಮೊಹಾಲಿ, 14 ಇಂದೋರ್​ ಮತ್ತು 17ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ಟಿ20 ವಿಶ್ವಕಪ್​ಗೂ ಮುನ್ನ ಇರುವ ಕೊನೆಯ ಅಂತರರಾಷ್ಟ್ರೀಯ ಟಿ20 ಸರಣಿ ಇದಾಗಿದೆ.
  • ಆಂಗ್ಲರ ವಿರುದ್ಧ ಐದು ಟೆಸ್ಟ್​​: ಜನವರಿ-ಮಾರ್ಚ್: ಅಫ್ಘನ್​ ವಿರುದ್ಧದ ಟಿ20 ಮುಗಿದ ನಂತರ ಇಂಗ್ಲೆಂಡ್​ ವಿರುದ್ಧ ಭಾರತ ಐದು ಟೆಸ್ಟ್​ ಪಂದ್ಯಗಳ ಸುದೀರ್ಘ ಸರಣಿ ಆಡಲಿದೆ. 2025ರ ವಿಶ್ವ ಟೆಸ್ಟ್​​ ಚಾಂಪಿಯನ್​ ಶಿಪ್​ ಹಿನ್ನೆಲೆಯಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಜನವರಿ 25ರಿಂದ ಮಾರ್ಚ್​​ 11 ರವರೆಗೆ ಪಂದ್ಯಗಳು ನಡೆಯಲಿದೆ.
  • ಟಿ20 ವಿಶ್ವಕಪ್ 2024:ವೆಸ್ಟ್​ ಇಂಡೀಸ್​ ಮತ್ತು ಯುಎಸ್​ಎ: 17ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ಮುಗಿದ ಬೆನ್ನಲ್ಲೇ 2024 ಪುರುಷರ ಟಿ20 ವಿಶ್ವಕಪ್ ನಡೆಯಲಿದೆ. ಜೂನ್ 4 ರಂದು ಪ್ರಾರಂಭವಾಗುವ ಪಂದ್ಯಾವಳಿಯು ಜೂನ್ 30ರ ವರೆಗೆ ಇರಲಿದೆ. ಟಿ20 ವಿಶ್ವಕಪ್​ನ ಚೊಚ್ಚಲ ಆವೃತ್ತಿ ಮಾತ್ರ ಗೆದ್ದಿರುವ ಭಾರತ ಮತ್ತೊಂದು ಯಶಸ್ಸಿನ ಗುರಿಯನ್ನು ಎದುರು ನೋಡುತ್ತಿದೆ. ಅಲ್ಲದೇ, 11 ವರ್ಷಗಳ ಐಸಿಸಿ ಟ್ರೋಫಿಯ ಬರವನ್ನು ನೀಗಿಸುವತ್ತ ಹವಣಿಸುತ್ತಿದೆ.
  • ಲಂಕಾ ಪ್ರವಾಸ: ವಿಶ್ವಕಪ್​ ಪ್ರವಾಸದ ನಂತರ ಭಾರತ ಲಂಕೆಗೆ ಪ್ರಯಾಣಿಸಲಿದೆ. ಶ್ರೀಲಂಕಾದಲ್ಲಿ ಮೂರು ಏಕದಿನ ಮತ್ತು ಮೂರು ಟಿ20ಗಳು ನಡೆಯಲಿದೆ. ಪ್ರವಾಸದ ದಿನಾಂಕಗಳು ಇನ್ನೂ ನಿಗದಿಯಾಗಿಲ್ಲ.
  • ಬಾಂಗ್ಲಾ ವಿರುದ್ಧ ಟಿ20- ಟೆಸ್ಟ್​​: ಆಗಸ್ಟ್​ನಲ್ಲಿ ತಂಡ ವಿರಾಮ ಪಡೆದ ನಂತರ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಪಂದ್ಯಗಳನ್ನು ಆಡಲಿದೆ. ಸಪ್ಟೆಂಬರ್ ತಿಂಗಳಲ್ಲಿ ಎರಡು ಟೆಸ್ಟ್​​, 3 ಟಿ20 ಪಂದ್ಯಗಳು ನಡೆಯಲಿದೆ. ಮಾರ್ಚ್​​ ನಂತರ ಸುಮಾರು ಆರು ತಿಂಗಳ ಅಂತರದಲ್ಲಿ ಭಾರತ ಮತ್ತೆ ರೆಡ್​ ಬಾಲ್ ಕ್ರಿಕೆಟ್​ ಆಡಲಿದೆ.
  • ಕಿವೀಸ್​ ವಿರುದ್ಧ ಮೂರು ಟೆಸ್ಟ್​​: ಅಕ್ಟೋಬರ್​ನಲ್ಲಿ ಭಾರತ ನ್ಯೂಜಿಲೆಂಡ್​ ವಿರುದ್ಧ ತವರಿನಲ್ಲೇ ಮೂರು ಟೆಸ್ಟ್​ ಪಂದ್ಯಗಳ ಸರಣಿಯನ್ನು ಆಡಲಿದೆ. ಇದು 2023-25ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಅಂತಿಮ ಸರಣಿ ಆಗಿರಲಿದೆ.
  • ವರ್ಷಾಂತ್ಯಕ್ಕೆ ಕಾಂಗರೂಗಳೊಂದಿಗೆ ಪೈಪೋಟಿ:ನವೆಂಬರ್-ಡಿಸೆಂಬರ್​ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ವರ್ಷವನ್ನು ಕೊನೆಗೊಳಿಸುತ್ತದೆ. ಇದು 2025ರ ವರೆಗೆ ನಡೆಯುವ ಸಾಧ್ಯತೆ ಇದೆ. ಸರಣಿಯ ವೇಳಾಪಟ್ಟಿ ಇನ್ನೂ ದೃಢೀಕರಿಸದ ಕಾರಣ ಐದು ಟೆಸ್ಟ್‌ಗಳು ನಡೆಯುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ABOUT THE AUTHOR

...view details