ಕೇಪ್ ಟೌನ್ : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಎಲ್ಲಾ ಬ್ಯಾಟರ್ಗಳು ಎರಡೂ ಇನ್ನಿಂಗ್ಸ್ನಲ್ಲೂ ಕ್ಯಾಚ್ ಮೂಲಕವೇ ವಿಕೆಟ್ ಒಪ್ಪಿಸಿದ್ದಾರೆ. ಇದು ಶತಮಾನದ ಇತಿಹಾಸವಿರುವ ಟೆಸ್ಟ್ ಕ್ರಿಕೆಟ್ನಲ್ಲಿ ಕಂಡುಬಂದ ಮೊದಲ ನಿದರ್ಶನವಾಗಿದೆ.
ಕೇಪ್ಟೌನ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕೊನೆಯ ಟೆಸ್ಟ್ ಪಂದ್ಯದಲ್ಲಿ ಸರಣಿ ಗೆಲುವಿಗಾಗಿ ಪೈಪೋಟಿ ನಡೆಸುತ್ತಿವೆ. ಈ ಪಂದ್ಯದಲ್ಲಿ ಭಾರತ ತಂಡ ತನ್ನ ಎಲ್ಲಾ 20 ವಿಕೆಟ್ಗಳನ್ನು ಕ್ಯಾಚ್ ಮೂಲಕವೇ ಕಳೆದುಕೊಂಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎರಡೂ ಇನ್ನಿಂಗ್ಸ್ನಲ್ಲಿ ಕ್ಯಾಚ್ ಮೂಲಕವೇ ವಿಕೆಟ್ ಕಳೆದುಕೊಂಡ ಮೊದಲ ದೇಶ ಭಾರತ ಎನಿಸಿಕೊಂಡಿದೆ.
2004ರಲ್ಲಿ ಕರ್ನಾಟಕ ತಂಡ ಮುಂಬೈ ವಿರುದ್ಧ, ಸೆಬಾಸ್ಟಿಯನಿಟ್ಸ್ ಕ್ರಿಕೆಟ್ ಮತ್ತು ಅಥ್ಲೆಟಿಕ್ ಕ್ಲಬ್ 2001ರಲ್ಲಿ ಚಿಲಾವ್ ಮರಿಯಾನ್ಸ್ ಕ್ರಿಕೆಟ್ ಕ್ಲಬ್ ವಿರುದ್ಧ, 1999ರಲ್ಲಿ ಸರ್ಗೋಧಾ ತಂಡ ಪೇಶಾವರ್ ವಿರುದ್ಧ ಮತ್ತು 1965ರಲ್ಲಿ ಹೈದರಾಬಾದ್ ತಂಡ ಮೈಸೂರು(ಕರ್ನಾಟಕ) ವಿರುದ್ಧ ಎರಡೂ ಇನ್ನಿಂಗ್ಸ್ನಲ್ಲಿ ಕ್ಯಾಚ್ ಮೂಲಕ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು.