ಕರ್ನಾಟಕ

karnataka

ETV Bharat / sports

ಶ್ರೀ'ಲಂಕಾ ದಹನ' ಮಾಡಿದ ಜಡೇಜಾ: ಭಾರತಕ್ಕೆ ಇನ್ನಿಂಗ್ಸ್​ ಮತ್ತು 222 ರನ್​ಗಳ ಜಯ - ಶ್ರೀಲಂಕಾ ಮಣಿಸಿದ ಭಾರತ

400 ರನ್​ಗಳ ಬೃಹತ್​ ಮುನ್ನಡೆ ಸಾಧಿಸಿದ ಭಾರತ ಪ್ರವಾಸಿ ತಂಡದ ಮೇಲೆ ಫಾಲೋ ಆನ್ ವಿಧಿಸಿತು. ಎರಡನೇ ಇನ್ನಿಂಗ್ಸ್​ನಲ್ಲೂ ಭಾರತದ ಸ್ಪಿನ್​ ದಾಳಿಗೆ ಉತ್ತರಿಸಲಾಗದ ಸಿಂಹಳೀಯ ಪಡೆ ಕೇವಲ 178 ರನ್​ಗಳಿಗೆ ಸರ್ವಪತನ ಕಂಡು ಇನ್ನಿಂಗ್ಸ್ ಸೋಲು ಕಂಡಿತು.

ಭಾರತ ಶ್ರೀಲಂಕಾ ಟೆಸ್ಟ್​ ಸರಣಿ
ಭಾರತ ಶ್ರೀಲಂಕಾ ಟೆಸ್ಟ್​ ಸರಣಿ

By

Published : Mar 6, 2022, 4:30 PM IST

Updated : Mar 6, 2022, 6:45 PM IST

ಮೊಹಾಲಿ:ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಆಲ್​ರೌಂಡರ್​ ಆಟದ ನೆರವಿನಿಂದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯವನ್ನು ಭಾರತ ತಂಡ ಇನ್ನಿಂಗ್ಸ್ ಹಾಗೂ 222 ರನ್​ಗಳ ಬೃಹತ್​ ಅಂತರದ ಜಯ ಸಾಧಿಸಿ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ರವೀಂದ್ರ ಜಡೇಜಾ ಅವರ ಅಜೇಯ 175 ರನ್​ಗಳ ನೆರವಿನಿಂದ ಟೀಂ ಇಂಡಿಯಾ ಬರೋಬ್ಬರಿ 574 ರನ್​ ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿ ಕೊಂಡಿತ್ತು. ಅಲ್ಲದೇ 2ನೇ ದಿನವೇ ಶ್ರೀಲಂಕಾ ತಂಡದ ಪ್ರಮುಖ 4 ವಿಕೆಟ್​ ಪಡೆದುಕೊಂಡಿತ್ತು.

3ನೇ ದಿನವಾದ ಇಂದು ಬ್ಯಾಟಿಂಗ್​ 104/4 ರನ್​ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಜಡೇಜಾ(41ಕ್ಕೆ5) ಬೌಲಿಂಗ್ ದಾಳಿಗೆ ತತ್ತರಿಸಿ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 65 ಓವರ್​ನಲ್ಲಿ ಕೇವಲ 174 ರನ್ ಗಳಿಗೆ ಆಲೌಟ್​ ಆಯಿತು. ಪಾತುಮ್ ನಿಸ್ಸಾಂಕ ಅಜೇಯ 61 ರನ್​ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಇವರನ್ನು ಹೊರೆತುಪಡಿಸಿದರೆ, ಕರುಣರತ್ನೆ 28, ಅಸಲಂಕ 29 ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ನಾಲ್ಕು ಬ್ಯಾಟರ್​ಗಳು ಸೊನ್ನೆ ಸುತ್ತಿದರು.

ಇನ್ನು 400 ರನ್​ಗಳ ಬೃಹತ್​ ಮುನ್ನಡೆ ಸಾಧಿಸಿದ ಭಾರತ ಪ್ರವಾಸಿ ತಂಡದ ಮೇಲೆ ಫಾಲೋ ಆನ್ ವಿಧಿಸಿತು. ಎರಡನೇ ಇನ್ನಿಂಗ್ಸ್​ನಲ್ಲೂ ಭಾರತದ ಸ್ಪಿನ್​ ದಾಳಿಗೆ ಉತ್ತರಿಸಲಾಗದ ಸಿಂಹಳೀಯ ಪಡೆ ಕೇವಲ 178 ರನ್​ಗಳಿಗೆ ಸರ್ವಪತನ ಕಂಡಿತು.

ಎರಡನೇ ಇನ್ನಿಂಗ್ಸ್​ನಲ್ಲಿ ವಿಕೆಟ್​ ಕೀಪರ್ ನಿರೋಷನ್​ ಡಿಕ್ವೆಲ್ಲಾ ಅಜೇಯ 51 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಧನಂಜಯ ಡಿ ಸಿಲ್ವಾ 30, ಏಂಜೆಲೊ ಮ್ಯಾಥ್ಯೂಸ್​ 28, ಚರಿತ್​ ಅಸಲಂಕಾ 20, ನಾಯಕ ಕರುಣರತ್ನೆ 27 ರನ್​ಗಳಿಸಿದರೆ,ಉಳಿದ ಬ್ಯಾಟರ್​ಗಳು ಎರಡಂಕಿ ಮೊತ್ತ ದಾಟುವಲ್ಲಿ ವಿಫಲರಾದರು.

ಎರಡನೇ ಇನ್ನಿಂಗ್ಸ್​ನಲ್ಲೂ ಮಿಂಚಿದ ರವೀಂದ್ರ ಜಡೇಜಾ 46 ರನ್ ನೀಡಿ 4 ವಿಕೆಟ್ ಪಡೆದರೆ, ಅನುಭವಿ ಸ್ಪಿನ್ನರ್ ಅಶ್ವಿನ್​ 47ಕ್ಕೆ4 ವಿಕೆಟ್ ಪಡೆದರು. ಮೊಹಮ್ಮದ್ ಶಮಿ 48ಕ್ಕೆ 2 ವಿಕೆಟ್ ಪಡೆದು ಸುಲಭ ಗೆಲುವಿಗೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್:

  • ಭಾರತ ಮೊದಲ ಇನ್ನಿಂಗ್ಸ್ 574/8 ಡಿಕ್ಲೇರ್(ರವೀಂದ್ರ ಜಡೇಜಾ 175, ಪಂತ್ 96, ಅಶ್ವಿನ್ 61, ಹನುಮ ವಿಹಾರಿ 58, ಸುರಂಗ ಲಕ್ಮಲ್ 90ಕ್ಕೆ2, ಫರ್ನಾಂಡೊ 135ಕ್ಕೆ2, ಎಂಬುಲ್ದೇನಿಯಾ 188ಕ್ಕೆ 2)
  • ಶ್ರೀಲಂಕಾ ಮೊದಲ ಇನ್ನಿಂಗ್ಸ್ 174 ಆಲೌಟ್: ಪಾತುಮ್ ನಿಸ್ಸಾಂಕ ಅಜೇಯ 61, ರವೀಂದ್ರ ಜಡೇಜಾ 41ಕ್ಕೆ 5, ಅಶ್ವಿನ್ 49ಕ್ಕೆ 2, ಬುಮ್ರಾ 36ಕ್ಕೆ 2)
  • ಶ್ರೀಲಂಕಾ 2ನೇ ಇನ್ನಿಂಗ್ಸ್ 178ಕ್ಕೆ ಆಲೌಟ್: ನಿರೋಷನ್ ಡಿಕ್ವೆಲ್ಲಾ ಅಜೇಯ 51,ಜಡೇಜಾ 46ಕ್ಕೆ 4, ಅಶ್ವಿನ್ 47ಕ್ಕೆ 4, ಶಮಿ48ಕ್ಕೆ 2 )
  • ಭಾರತಕ್ಕೆ ಇನ್ನಿಂಗ್ಸ್ ಹಾಗೂ 222 ರನ್​ ಜಯ. ಪಂದ್ಯ ಶ್ರೇಷ್ಠ ರವೀಂದ್ರ ಜಡೇಜಾ

ಇದನ್ನೂ ಓದಿ:ಪುದುಚೆರಿ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್​ ಮತ್ತು 20 ರನ್​ ಜಯ: ಕ್ವಾರ್ಟರ್​ ಫೈನಲ್ ಪ್ರವೇಶ

Last Updated : Mar 6, 2022, 6:45 PM IST

ABOUT THE AUTHOR

...view details