ಬೆಂಗಳೂರು: ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಅಹರ್ನಿಶಿ ಟೆಸ್ಟ್ ಪಂದ್ಯವನ್ನು 238ರನ್ಗಳಿಂದ ಗೆಲುವು ಸಾಧಿಸಿ, ಸರಣಿಯನ್ನು 2-0ಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಭಾರತ ನೀಡಿದ್ದ 447 ರನ್ಗಳ ಗುರಿ ಬೆನ್ನತ್ತಿದ ಪ್ರವಾಸಿ ಶ್ರೀಲಂಕಾ ತಂಡ ಕೇವಲ 208ರನ್ಗಳಿಗೆ ಆಲೌಟ್ ಆಗುವ ಮೂಲಕ ಮತ್ತೊಂದು ಹೀನಾಯ ಸೋಲಿಗೆ ತುತ್ತಾಯಿತು.
ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ ಮೊದಲ ಓವರ್ನಲ್ಲೇ ಲಹಿರು ತಿರಿಮನ್ನೆ(0) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. 2ನೇ ದಿನದಂತ್ಯಕ್ಕೆ 7 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 28 ರನ್ಗಳಿಸಿದ್ದ ಪ್ರವಾಸಿ ತಂಡ, 3ನೇ ದಿನವಾದ ಇಂದು 2ನೇ ವಿಕೆಟ್ಗೆ 97 ರನ್ ಸೇರಿಸಿತು. 60 ಎಸೆತಗಳಲ್ಲಿ 8ಬೌಂಡರಿ ಸಹಿತ 54 ರನ್ಗಳಿಸಿದ್ದ ಕುಸಾಲ್ ಮೆಂಡಿಸ್ ಔಟಾಗುತ್ತಿದ್ದಂತೆ ಲಂಕಾ ತಂಡದ ಪತನ ಆರಂಭವಾಯಿತು.
ನಂತರ ಬಂದತಂಗಹ ಮ್ಯಾಥ್ಯೂಸ್(1), ಧನಂಜಯ ಡಿ ಸಿಲ್ವಾ(4), ನಿರೋಷನ್ ಡಿಕ್ವೆಲ್ಲಾ(12), ಅಸಲಂಕಾ(5), ಎಂಬುಲ್ದೇನಿಯಾ(2), ಸುರಂಗ ಲಕ್ಮಲ್(1) ವಿಶ್ವ ಫರ್ನಾಂಡೊ(2) ಭಾರತೀಯ ಬೌಲರ್ಗಳ ದಾಳಿಗೆ ಉತ್ತರಿಸಲಾಗದೆ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.