ರಾಜ್ಕೋಟ್:ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ 82 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ರಿಷಭ್ ಪಡೆ 2-2ರ ಸಮಬಲ ಸಾಧಿಸಿದೆ.
ಸರಣಿಯಲ್ಲಿ ಸತತ ನಾಲ್ಕನೇ ಬಾರಿಗೆ ಟಾಸ್ ಗೆದ್ದ ಹರಿಣಗಳು ಫೀಲ್ಡಿಂಗ್ ಆಯ್ದುಕೊಂಡಿದ್ದರು. ಬ್ಯಾಟಿಂಗ್ಗಿಳಿದ ಟೀಂ ಇಂಡಿಯಾ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. 81 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ದಿನೇಶ್ ಕಾರ್ತಿಕ್ ಅರ್ಧಶಕ(55) ಹಾಗೂ ಹಾರ್ದಿಕ್ ಪಾಂಡ್ಯ 46 ರನ್ ಬಾರಿಸಿ ನೆರವಾದರು.
ಇನ್ನುಳಿದಂತೆ, ಕಳೆದ ಪಂದ್ಯದ ಅರ್ಧಶತಕವೀರರಾದ ರುತುರಾಜ್ ಗಾಯಕ್ವಾಡ್ 4, ಕಿಶನ್ 27, ಶ್ರೇಯಸ್ ಅಯ್ಯರ್ 4 ಹಾಗೂ ನಾಯಕ ರಿಷಭ್ ಪಂತ್ 17 ರನ್ ಗಳಿಸಿ ನಿರಾಸೆ ಮೂಡಿಸಿದರು. ನಿಗದಿತ 20 ಓವರ್ಗಳಲ್ಲಿ ಭಾರತ 169 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು.