ಸೆಂಚುರಿಯನ್: ಕನ್ನಡಿಗ ಕೆ ಎಲ್ ರಾಹುಲ್ ಮನಮೋಹಕ ಶತಕ ಮತ್ತು ಬೌಲರ್ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 113 ರನ್ಗಳ ಭರ್ಜರಿ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೆ ಎಲ್ ರಾಹುಲ್(123) ಶತಕದ ನೆರವಿನಿಂದ 327 ರನ್ಗಳಿಸಿದರೆ, ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡವನ್ನು 197ಕ್ಕೆ ಕಟ್ಟಿಹಾಕಿತ್ತು. ಮತ್ತೆ ಎರಡನೇ ಇನ್ನಿಂಗ್ಸ್ನಲ್ಲಿ 174 ರನ್ಗಳಿಗೆ ಆಲೌಟ್ ಆದರೂ ಮೊದಲ ಇನ್ನಿಂಗ್ಸ್ನ 130 ರನ್ಗಳ ಮುನ್ನಡೆ ಸೇರಿ ಹರಿಣಗಳಿಗೆ 305ರನ್ಗಳ ಕಠಿಣ ಗುರಿ ನೀಡಿತ್ತು.
305 ರನ್ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 5ನೇ ದಿನ 191 ರನ್ಗಳಿಗೆ ಆಲೌಟ್ ಆಗುವ ಮೂಲಕ ತವರಿನಲ್ಲೇ 113 ರನ್ಗಳ ಹೀನಾಯ ಸೋಲು ಕಂಡಿತು. ಇದು ಭಾರತಕ್ಕೆ ಸೆಂಚುರಿಯನ್ನಲ್ಲಿ ಮೊದಲ ಜಯವಾದರೆ, ವಿರಾಟ್ ಕೊಹ್ಲಿ ಹರಿಣಗಳ ನಾಡಿನಲ್ಲಿ 2 ಪಂದ್ಯ ಗೆದ್ದ ಏಕೈಕ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
Boxing Day Test in Centurion: ಬಾಕ್ಸಿಂಗ್ ಡೇ ಟೆಸ್ಟ್ನ 4ನೇ ದಿನ ದಕ್ಷಿಣ ಆಫ್ರಿಕಾ 94 ರನ್ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು. ಬುಧವಾರ 52 ರನ್ಗಳಿಸಿದ್ದ ನಾಯಕ ಡೀನ್ ಎಲ್ಗರ್ 5ನೇ ದಿನ ಟೆಂಬ ಬವೂಮ ಜೊತೆಗೆ ಬ್ಯಾಟಿಂಗ್ ಆರಂಭಿಸಿ 36 ರನ್ 14.3 ಓವರ್ಗಳ ಕಾಲ ಕ್ರೀಸ್ನಲ್ಲಿ ಕಾಲ ಕಳೆದರು. ಈ ಹಂತದಲ್ಲಿ ಕಣಕ್ಕಿಳಿದ ಬುಮ್ರಾ 156 ಎಸೆತಗಳಲ್ಲಿ 12 ಬೌಂಡರಿ ಸಹಿತ 77 ರನ್ಗಳಿಸಿ ಅಪಾಯಕಾರಿಯಾಗುತ್ತಿದ್ದ ಡೀನ್ ಎಲ್ಗರ್ ವಿಕೆಟ್ ಉಡಾಯಿಸಿ ಭಾರತಕ್ಕೆ ಬ್ರೇಕ್ ನೀಡಿದರು. ನಂತರ ಬಂದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ 21 ರನ್ಗಳಿಸಿ ಸಿರಾಜ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರೆ, ನಂತರದ ಓವರ್ನಲ್ಲೇ ಹೊಸ ಬ್ಯಾಟರ್ ವಿಯಾನ್ ಮಲ್ಡರ್ರನ್ನು ಶಮಿ ಪೆವಿಲಿಯನ್ಗಟ್ಟಿದರು.
ಭೋಜನ ವಿರಾಮಕ್ಕೆ 182 ರನ್ಗಳಿಸಿದ್ದ ಡೀನ್ ಎಲ್ಗರ್ ಪಡೆ ವಿರಾಮದ ನಂತರ ಕೇವಲ 2 ಓವರ್ಗಳಲ್ಲಿ ಉಳಿದ ಮೂರು ವಿಕೆಟ್ ಕಳೆದುಕೊಂಡಿತು.
ಭಾರತದ ಪರ ಬುಮ್ರಾ, ಶಮಿ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಮತ್ತು ಅಶ್ವಿನ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಶಮಿ ಮೊದಲ ಇನ್ನಿಂಗ್ಸ್ನಲ್ಲೂ 5 ವಿಕೆಟ್ ಪಡೆದಿದ್ದರು.
ಇದನ್ನೂ ಓದಿ:ಚೇತೇಶ್ವರ್ ಪೂಜಾರ, ರಹಾನೆ ಫಾರ್ಮ್ ವಿಚಾರದಲ್ಲಿ ನಾವು ತಾಳ್ಮೆವಹಿಸಬೇಕಾಗಿದೆ: ಬ್ಯಾಟಿಂಗ್ ಕೋಚ್ ರಾಥೋರ್