ಢಾಕಾ(ಬಾಂಗ್ಲಾದೇಶ):ಢಾಕಾದ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಮುಂದಿನ ವಿಶ್ವಕಪ್‌ಗೆ ತಾಲೀಮಿನ ಭಾಗವಾಗಿ ಉಭಯ ತಂಡಗಳು ಸೆಣಸಾಡಲಿವೆ.
ರಿಷಬ್ ಪಂತ್ ಸರಣಿಯಿಂದಲೇ ಹೊರಕ್ಕೆ:ಸತತ ವೈಫಲ್ಯ ಕಾಣುತ್ತಿರುವ ವಿಕೆಟ್ ಕೀಪರ್ ರಿಷಬ್ ಪಂತ್ಗೆ ಸರಣಿಯಿಂದಲೇ ವಿಶ್ರಾಂತಿ ನೀಡಲಾಗಿದೆ. ವೈದ್ಯರ ಸೂಚನೆಯ ಮೇರೆಗೆ ಪಂತ್‌ರನ್ನು ಸರಣಿಯಿಂದ ಕೈಬಿಡಲಾಗಿದೆ. ಇದಕ್ಕೆ ಕಾರಣ ಏನೆಂಬುದನ್ನು ಸ್ಪಷ್ಟಪಡಿಸಿಲ್ಲ. ಅಲ್ಲದೇ ಸರಣಿಗೆ ಬದಲಿ ಆಟಗಾರರನ್ನೂ ಸೂಚಿಸಿಲ್ಲ. ಏಕದಿನದ ಬಳಿಕ ನಡೆಯುವ ಟೆಸ್ಟ್ಗೆ ರಿಷಬ್ ಪಂತ್ ವಾಪಸ್ಸಾಗಲಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಐಪಿಎಲ್ನಲ್ಲಿ ಮಿಂಚು ಹರಿಸಿದ ಯುವ ವೇಗಿ ಕುಲದೀಪ್ ಸೆನ್ ಮೊದಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಆಡುವ ಹನ್ನೊಂದರ ಬಳಗದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಪದಾರ್ಪಣೆ ಮಾಡಲಿದ್ದಾರೆ. ಅಭ್ಯಾಸದ ವೇಳೆ ಚೆಂಡು ಎದೆಗೆ ಬಡಿದ ಕಾರಣ ಅಕ್ಷರ್ ಪಟೇಲ್ಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ.