ಕರ್ನಾಟಕ

karnataka

ETV Bharat / sports

ವೆಸ್ಟ್​ ಇಂಡೀಸ್​ T-20 ಸರಣಿಗೆ ಟೀಂ ಇಂಡಿಯಾ ಪ್ರಕಟ: ಕೊಹ್ಲಿ ಔಟ್​​, ಕಮ್​​ಬ್ಯಾಕ್​ ಮಾಡಿದ ಕೆಎಲ್​​,ಅಶ್ವಿನ್​ - ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ

ವೆಸ್ಟ್​ ಇಂಡೀಸ್ ವಿರುದ್ಧದ ಐದು ಟಿ-20 ಪಂದ್ಯಗಳ ಸರಣಿಗೋಸ್ಕರ ಟೀಂ ಇಂಡಿಯಾ ತಂಡ ಪ್ರಕಟಗೊಂಡಿದೆ. 18 ಸದಸ್ಯರ ತಂಡದಲ್ಲಿ ಆರ್​​.ಅಶ್ವಿನ್​, ಕುಲ್ದೀಪ್ ಹಾಗೂ ಆರಂಭಿಕ ಆಟಗಾರ ರಾಹುಲ್​ ಕಮ್​​ಬ್ಯಾಕ್ ಮಾಡಿದ್ದಾರೆ.

India announce squad for T20I series
India announce squad for T20I series

By

Published : Jul 14, 2022, 3:10 PM IST

ಮುಂಬೈ:ಇಂಗ್ಲೆಂಡ್​ ವಿರುದ್ಧದ ಕ್ರಿಕೆಟ್​​ ಸರಣಿ ಬೆನ್ನಲ್ಲೇ ಟೀಂ ಇಂಡಿಯಾ ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಳ್ಳಲಿದೆ. ಮೊದಲು ಏಕದಿನ ಸರಣಿಯಲ್ಲಿ ಭಾಗಿಯಾಗಲಿರುವ ಭಾರತ ತದ ನಂತರ ಟಿ-20 ಸರಣಿ ಆಡಲಿದೆ. ಅದಕ್ಕಾಗಿ ಆಯ್ಕೆ ಸಮಿತಿಯಿಂದ 18 ಸದಸ್ಯರ ತಂಡ ಪ್ರಕಟಿಸಲಾಗಿದೆ. ಮುಖ್ಯವಾಗಿ ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾ, ಮಾಜಿ ನಾಯಕ ವಿರಾಟ್​ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ತಂಡಕ್ಕೆ ಕೆಎಲ್​​ ರಾಹುಲ್​ ಹಾಗೂ ಆರ್​​ ಅಶ್ವಿನ್​ ಕಮ್​​ಬ್ಯಾಕ್ ಮಾಡಿದ್ದಾರೆ. ಇವರ ಜೊತೆಗೆ ಚೈನಾಮ್ಯಾನ್ ಖ್ಯಾತಿಯ ಕುಲ್ದೀಪ್ ಯಾದವ್​ ಸಹ ಅವಕಾಶ ಪಡೆದುಕೊಂಡಿದ್ದಾರೆ.

ರೋಹಿತ್​ ಶರ್ಮಾ ನಾಯಕತ್ವದ 18 ಸದಸ್ಯರ ತಂಡ ಪ್ರಕಟಿಸಲಾಗಿದ್ದು, ಶಸ್ತ್ರಚಿಕಿತ್ಸೆಗೊಳಗಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ ಕೆಎಲ್​ ರಾಹುಲ್​ ತಂಡಕ್ಕೆ ಮರಳಿದ್ದಾರೆ. ಇದರ ಬೆನ್ನಲ್ಲೇ ಅವಕಾಶ ವಂಚಿತರಾಗಿದ್ದ ಆರ್​​.ಅಶ್ವಿನ್​​ಗೂ ಮಣೆ ಹಾಕಲಾಗಿದೆ. ಆದರೆ, ಏಕದಿನ ಹಾಗೂ ಟಿ -20 ಸರಣಿಯಿಂದ ಬುಮ್ರಾ ಹಾಗೂ ಕೊಹ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.

ಟಿ-20 ತಂಡ ಇಂತಿದೆ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್​, ಕೆಎಲ್ ರಾಹುಲ್​, ಸೂರ್ಯಕುಮಾರ್ ಯಾದವ್​, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್​, ದಿನೇಶ್ ಕಾರ್ತಿಕ್​, ರಿಷಭ್​ ಪಂತ್​(ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್​, ಆರ್​.ಅಶ್ವಿನ್​, ರವಿ ಬಿಷ್ಣೋಯ್​, ಕುಲ್ದೀಪ್ ಯಾದವ್​, ಭುವನೇಶ್ವರ್ ಕುಮಾರ್​, ಆವೇಶ್ ಖಾನ್​, ಹರ್ಷಲ್ ಪಟೇಲ್​​,ಅರ್ಷದೀಪ್ ಸಿಂಗ್​

ಇದನ್ನೂ ಓದಿರಿ:ರೋಹಿತ್​ ಶರ್ಮಾ ಬಾರಿಸಿದ ಸಿಕ್ಸರ್​​ನಿಂದ ಬಾಲಕಿಗೆ ಪೆಟ್ಟು.. ಪುಟಾಣಿ ಆರೋಗ್ಯ ವಿಚಾರಿಸಿದ ಹಿಟ್​ಮ್ಯಾನ್​!

ವೆಸ್ಟ್ ಇಂಡೀಸ್​ ವಿರುದ್ಧದ ಏಕದಿನ ಸರಣಿಯಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ, ವಿಕೆಟ್ ಕೀಪರ್ ಬ್ಯಾಟರ್​ ರಿಷಭ್ ಪಂತ್​ ಹಾಗೂ ಜಸ್ಪ್ರೀತ್ ಬುಮ್ರಾಗೂ ವಿಶ್ರಾಂತಿ ನೀಡಲಾಗಿದೆ. ಇದರ ಜೊತೆಗೆ ಭುವನೇಶ್ವರ್ ಕುಮಾರ್​, ಹರ್ಷಲ್ ಪಟೇಲ್​​ಗೂ ಮಣೆ ಹಾಕಿಲ್ಲ. ಹೀಗಾಗಿ, ತಂಡವನ್ನ ಶಿಖರ್ ಧವನ್ ಮುನ್ನಡೆಸಲಿದ್ದಾರೆ.

ಏಕದಿನ ತಂಡ : ಶಿಖರ್ ಧವನ್​(ಕ್ಯಾಪ್ಟನ್), ಋತುರಾಜ್ ಗಾಯಕ್ವಾಡ್​, ಶುಬ್ಮನ್ ಗಿಲ್​, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್​, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿ.ಕೀ), ಸಂಜು ಸ್ಯಾಮ್ಸನ್​(ವಿ.ಕೀ), ರವೀಂದ್ರ ಜಡೇಜಾ(ಉಪನಾಯಕ), ಶಾರ್ದೂಲ್ ಠಾಕೂರ್. ಯಜುವೇಂದ್ರ ಚಹಲ್​​, ಅಕ್ಸರ್ ಪಟೇಲ್​, ಆವೇಶ್ ಖಾನ್​, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್​, ಅರ್ಷದೀಪ್ ಸಿಂಗ್

ABOUT THE AUTHOR

...view details