ರೋಸೋ (ಡೊಮಿನಿಕಾ):ಇಲ್ಲಿನ ವಿಂಡ್ಸರ್ ಪಾರ್ಕ್‌ನಲ್ಲಿ ಬುಧವಾರ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ನಂತರ ಟೀಂ ಇಂಡಿಯಾ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಡಿರಲಿಲ್ಲ. ಒಂದು ತಿಂಗಳ ನಂತರ ಭಾರತ, ಮತ್ತೆ ಮೈದಾನಕ್ಕೆ ಎಂಟ್ರಿ ಕೊಟ್ಟಿದೆ.
ರೋಹಿತ್ ಶರ್ಮಾ : ಕಳೆದೊಂದು ವಾರದಿಂದ ಇಲ್ಲಿದ್ದೇವೆ. ಇಲ್ಲಿನ ಬಾರ್ಬಡೋಸ್ ಮೈದಾನಲ್ಲಿ ಇಂದು ಅಭ್ಯಾಸ ಪಂದ್ಯ ಕೂಡ ನಡೆಸಿದೆವು. ಡೊಮಿನಿಕಾ ಸೇರಿದಂತೆ ಇತರಡೆ ಕಳೆದ 4 ದಿನಗಳಿಂದ ಮಳೆ ಬೀಳುತ್ತಿದ್ದು ಸದ್ಯ ಬಿಡುವು ನೀಡಿದೆ. ಟೀಂ ಇಂಡಿಯಾ ತಂಡದ ಆಟಗಾರರು ಎಲ್ಲ ರೀತಿಯಿಂದಲೂ ಫಿಟ್ ಇದ್ದು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಂಪೂರ್ಣ ಸಿದ್ಧವಾಗಿಯೇ ಬಂದಿದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದರು.
ಕ್ರೈಗ್ ಬ್ರಾಥ್‌ವೈಟ್ : ನಾವು ಕಳೆದ 10 ದಿನಗಳಿಂದ ಕಠಿಣ ಅಭ್ಯಾಸ ನಡೆಸಿದ್ದೇವೆ. ಈ ವೇಳೆ ಬ್ರಿಯಾನ್ ಲಾರಾ ನಮಗೆ ಬ್ಯಾಟಿಂಗ್ ಕುರಿತು ಸಲಹೆ ನೀಡಿದ್ದಾರೆ. ನಮ್ಮ ನಡುವೆಯೇ ಅಭ್ಯಾಸ ಪಂದ್ಯವಾಡಿದ್ದು, ಎಲ್ಲರೂ ಉತ್ತಮ ಲಯದಲ್ಲಿ ಕಾಣುತ್ತಿದ್ದಾರೆ. ಈ ರೀತಿ ಆಟಗಾರರನ್ನು ಧನಾತ್ಮಕವಾಗಿ ನೋಡಲು ಬಯಸುತ್ತೇನೆ ಎಂದು ವೆಸ್ಟ್ ಇಂಡೀಸ್ ತಂಡದ ನಾಯಕ ಹೇಳಿದ್ದಾರೆ.