ಬೆಂಗಳೂರು:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ 12ರಿಂದ ನಡೆಯಲಿರುವ ಹೊನಲು ಬೆಳಕಿನ ಕ್ರಿಕೆಟ್ ಟೆಸ್ಟ್‌ನಲ್ಲಿ ಆಡಲಿರುವ ಭಾರತ ಮತ್ತು ಶ್ರೀಲಂಕಾ ತಂಡಗಳು ಈಗಾಗಲೇ ಸಿಲಿಕಾನ್ ಸಿಟಿಗೆ ಬಂದಿಳಿದಿದ್ದು, ಇಂದಿನಿಂದ ಅಭ್ಯಾಸ ಆರಂಭಿಸಿವೆ.
ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಬಳಗ ಇನ್ನಿಂಗ್ಸ್ ಹಾಗೂ 222 ರನ್ಗಳ ಭರ್ಜರಿ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತ ಮೂರೇ ದಿನಗಳಲ್ಲಿ ಇನ್ನಿಂಗ್ಸ್ ಜಯ ಸಾಧಿಸಿದೆ. ಪಂದ್ಯ ಮೂರೇ ದಿನದಲ್ಲಿ ಅಂತ್ಯವಾಗಿದ್ದರಿಂದ ಎರಡು ದಿನ ಮೊಹಾಲಿಯಲ್ಲಿಯೇ ಉಳಿದ ಉಭಯ ತಂಡಗಳು, ಅಲ್ಲಿಯೇ ಪಿಂಕ್ ಬಾಲ್ ಬಳಸಿ ಅಭ್ಯಾಸ ಶುರು ಮಾಡಿದ್ದವು.